Karwar:ಕಾರವಾರ: ಅಖಂಡ ಧಾರವಾಡ ಜಿಲ್ಲೆಯ ಮೂರು ಪ್ರಮುಖ ರಾಜಕಾರಣಿಗಳು ರಾಷ್ಟ್ರ ರಾಜಕಾರಣದಲ್ಲಿ ಎಂಟ್ರಿ ಕೊಡುತ್ತಿದ್ದು, ಆ ಮೂವರ ಹೆಸರಿನಲ್ಲಿ ಬಿಜೆಪಿ ಅಡಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಗದಗ-ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿರುವ ಬಸವರಾಜ ಬೊಮ್ಮಾಯಿ ಅವರ ಹೆಸರಿನಲ್ಲಿ ‘ಬಿ’, ಬೆಳಗಾವಿ ಕ್ಷೇತ್ರದಿಂದ ಗೆದ್ದಿರುವ ಜಗದೀಶ್ ಶೆಟ್ಟರ್ ಅವರ ‘ಜೆ’ ಹಾಗೂ ಧಾರವಾಡ ಕ್ಷೇತ್ರದಿಂದ ವಿಜಯಿಯಾಗಿರುವ ಪ್ರಲ್ಹಾದ ಜೋಶಿಯವರ ಹೆಸರಿನಲ್ಲಿ ‘ಪಿ’ ಅಡಗಿರುವುದು ಸೋಜಿಗವೆನಿಸಿದರೂ ಸತ್ಯವಾಗಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಗದೀಶ ಶೆಟ್ಟರ್ ಅವರು ಮಂತ್ರಿಯಾಗಲ್ಲ ಎಂದಿದ್ದರು. ಇದಾದ ಕೆಲವು ತಿಂಗಳ ನಂತರ ಬಿಜೆಪಿಯಿಂದ ಹೊರಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಮತ್ತೆ ಕಾಂಗ್ರೆಸ್ ತೊರೆದು ಶೆಟ್ಟರ್, ಬಿಜೆಪಿ ಸೇರಿ, ಬೇರೆ ಜಿಲ್ಲೆಯ ಟಿಕೆಟ್ ಪಡೆದು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ

ಮೂವರು ನಾಯಕರು ಅವರದ್ದೆ ಆದ ರಾಜಕೀಯ ಪ್ರಭಾವಳಿ ಹೊಂದಿದ್ದು, ಮೂವರು ನಾಯಕರಿಂದ ಅವರಿರುವ ಕ್ಷೇತ್ರದ ಜೊತೆಗೆ ಅವಳಿನಗರ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂಬ ಆಶಾಭಾವನೆಯನ್ನ ಜನರು ಹೊಂದಿದ್ದಾರೆ.

ತ್ರಿಮೂರ್ತಿಗಳ ಪೈಕಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿದ್ದು, ಇನ್ನೊಬ್ಬರು ಕೇಂದ್ರದಲ್ಲಿ ಮಂತ್ರಿಗಳಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಮೂವರು ಲೋಕಸಭೆಯನ್ನ ಪ್ರವೇಶ ಮಾಡುತ್ತಿದ್ದಾರೆ.