ಕಾಂತಾರ ಚಾಪ್ಟರ್ 1ಯಶಸ್ಸಿಗೆ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ನಿರ್ದೇಶಕ ರಿಷಬ್ ಶೆಟ್ಟಿ
ಗೋಕರ್ಣ: ಪುರಾಣ ಪ್ರಸಿದ್ದ ಮಹಾಬಲೇಶ್ವರ ಮಂದಿರಕ್ಕೆ ಖ್ಯಾತ ಚಿತ್ರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಇಂದು ಕುಟುಂಬ ಸಮೇತರಾಗಿ ಆಗಮಿಸಿ ಆತ್ಮಲಿಂಗದ ದರ್ಶನ ಪಡೆದರು..ಅವರನ್ನ ಸ್ಮರಣಿಕೆ, ಪ್ರಸಾದ ನೀಡಿ ಗೌರವಿಸಲಾಯಿತು.ಇದಕ್ಕೂ ಮೊದಲು ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರದಲ್ಲಿ ತಾಮ್ರಗೌರಿ, ಸ್ಮಶಾನಕಾಳಿ ದೇವಾಲಯಕ್ಕೆ ತೆರಳಿ ದೇವಿ ದರ್ಶನ ಪಡೆದರು. ಈ ವೇಳೆ ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು, ರಿಷಬ್‍ರವರ ಪತ್ನಿ ಪ್ರಗತಿ, ಮಕ್ಕಳಾದ ರನ್ವಿತ್, ರಾಧ್ಯಾ ಮತ್ತಿತರರಿದ್ದರು.
ಕೆಎಸ್‌ಆರ್‌ಟಿಸಿ ಬಸ್,ಬುಲೆರೋ ನಡುವೆ ಭೀಕರ ಅಪಘಾತ
ಸಿದ್ದಾಪುರ : ತಾಲೂಕಿನ ಅರೆಂದೂರ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬುಲೆರೋ ನಡುವೆ ಅಪಘಾತ ಸಂಭವಿಸಿ 8ಕ್ಕೂ ಹೆಚ್ಚು ಪ್ರಯಾಣಿಕರು ಗಾಯ.ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರನ್ನ ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಶಿರಸಿಯ ಯುವತಿ ಉತ್ತರಖಂಡ ದುರಂತದಲ್ಲಿ ಸಾವು
Sirsi:ಶಿರಸಿ: ಉತ್ತರಖಂಡದಲ್ಲಿ ಹವಾಮಾನ ವೈಪರೀತ್ಯದಿಂದ ಸಂಭವಿಸಿದ ಹಿಮಪಾತದಲ್ಲಿ (Death due to snowfall in Uttarakhand)ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾಗನಳ್ಳಿ ಯುವತಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ, ಘಟನೆಘಟನೆಯಲ್ಲಿ ಪದ್ಮನಿ ಹೆಗಡೆ (35)ಅವರು ಮೃತರಾಗಿದ್ದಾರೆ.ಉತ್ತರ ಕಾಶಿಯ (uttra kashi) ಮೂವರ ಜೊತೆಯಲ್ಲಿ ಪದ್ಮಿನಿ ಕೂಡ ಹೋಗಿದ್ದರು.ಮೇ 29ರಿಂದ ಜೂ.7ರವರೆಗೆ ಆಯೋಜಿಸಿದ್ದ ಭಟವಾಡಿ ಮಲ್ಲಾ ಕುಶಕಲ್ಯಾಣ ಸಹಸ್ತ್ರತಾಲ್ ಟ್ರಕಿಂಗ್ ನಲ್ಲಿ ಪಾಲ್ಗೊಂಡಿದ್ದರು. ಪ್ರವಾಹದಲ್ಲಿ ಸಿಲುಕಿದವರಲ್ಲಿ ಅವರೂ ಪ್ರಸ್ತಾಪವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಅರ್ಬನ್ ಬ್ಯಾಂಕ್ ಅವ್ಯವಹಾರ ಪ್ರಕರಣ : ಪರಿಶೀಲನೆ ನಡೆಸಿದ ಅಧಿಕಾರಿಗಳು
Karwar:ಕಾರವಾರ: ನಗರದ ಅರ್ಬನ್ ಬ್ಯಾಂಕಿನಲ್ಲ ಠೇವಣಿದಾರರ ಹಣ ಅವ್ಯವಹಾರವಾಗಿರುವ (Urban Bank scandal) ಬಗ್ಗೆ ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಸಹಕಾರ ಇಲಾಖೆಯ ಜಂಟಿ ನಿಬಂಧಕ ಡಾ. ಸುರೇಶ ಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಂಕಿಗೆ ಭೇಟಿ ನೀಡಿದ ಜಂಟಿ ನಿಬಂಧಕರನ್ನ ಗ್ರಾಹಕರು ಮುತ್ತಿಗೆ ಹಾಕಿ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು.ಗ್ರಾಹಕರಾದ ದೀಪಕ ಹನೆಹಳ್ಳ , ಪ್ರಕರಣದ ಕುರಿತು ಮೃತರಾದ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ದೂರು ನೀಡಿದ್ದಾರೆ. ಹಿಂದಿನ ವ್ಯವಸ್ಥಾಪಕ ಗುರು ಬಾಂದೇಕರ ಅವರು ಅಪಘಾತದಲ್ಲಿ ಮೃತರಾಗಿದ್ದಾರೆ.ಆದರೆ ಅದು ಹಿಟ್ ಅಂಡ್ ರನ್ ಪ್ರಕರಣದ ರೀತಿ ಇದೆ ಎಂದು ಆರೋಪಿದ್ದಾರೆ. ಸಹಕಾರ ಇಲಾಖೆಯ ಜಂಟಿ ನಿಬಂಧಕ ಡಾ. ಸುರೇಶ ಗೌಡ ಅವರು , ಸದ್ಯ ಬ್ಯಾಂಕಿನ ಕಡತಗಳನ್ನು ಪರಿಶೀಲಿಸಿ ಸರಕಾರಕ್ಕೆ ತಿಳಿಸಲಾಗುವುದು. ಜತೆಗೆ ವಿಮೆಯ ಬಗ್ಗೆಯೂ ಆರ್‌ಬಿಐ ಅಧಿಕಾರಿಗಳೊಂದಿಗೆ ಮಾತನಾಡಿ ಗ್ರಾಹಕರಿಗೆ ತೊಂದರೆ ಆಗತ್ತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಅದಷ್ಟೆ ಅಲ್ಲದೆ. ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಗ್ರಾಹಕರು ವಿಚಲಿತರಾಗುವ ಅವಶ್ಯಕತೆ ಇಲ್ಲ ಎಂದರು.
ಜಾನುವಾರು ಸಾಗಾಟದ ವಾಹನ ತಡೆದ ಕುಮಟಾ ಪೊಲೀಸರು
ಕುಮಟಾ: ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಜಾನುವಾರುಗಳನ್ನ ರಕ್ಷಣೆ ಮಾಡಿ ಓರ್ವ ಆರೋಪಿ ಹಾಗೂ ವಾಹನವನ್ನ ವಶಕ್ಕೆ ಪಡೆದುಕೊಂಡ ಘಟನೆ ಕುಮಟಾದ ಹೊಳೆಗದ್ದೆ ಟೋಲ್ ಗೇಟ್ ಬಳಿ ನಡೆದಿದೆ. ಜೈನುದ್ದೀನ್ ಜಕ್ರಿಯಾ, ಕಾಸರಕೋಡ ಕೇರಳ ಈತನನ್ನ ಬಂಧಿಸಲಾಗಿದೆ, ಕಂಟೇನರ್ ಚಾಲಕ ಶಾಹಿದ್, ಕ್ಲೀನರ್ ಮುಕ್ರಂ ತಲೆ ಮರೆಸಿಕೊಂಡಿದ್ದಾರೆ.ಕಂಟೇನರ್ ವಾಹನದಲ್ಲಿ 21ಜಾನುವಾರುಗಳನ್ನ ಅಕ್ರಮವಾಗಿ ಹಿಂಸಾತ್ಮಕವಾಗಿ ಕಲಘಟಗಿಯಿಂದ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.ಕುಮಟಾ ಪೊಲೀಸರು ಹೊಳೆಗದ್ದೆ ಟೋಲ್‌ಗೇಟ್ ಬಳಿ ವಾಹನ ತಡೆದಿದ್ದಾರೆ.ನಾಲ್ವರು ಆರೋಪಿಗಳ ಪೈಕಿ ಓರ್ವನನ್ನ ವಶಕ್ಕೆ ಪಡೆದಿದ್ದಾರೆ, ಮೂವರು ಪರಾರಿಯಾಗಿದ್ದಾರೆ. ಲಾರಿಯಲ್ಲಿದ್ದ 21ಜಾನುವಾರುಗಳನ್ನ ರಕ್ಷಣೆ ಮಾಡಿದೆ, .ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.
ವಾಲ್ಮೀಕಿ ನಿಗಮದ ಅವ್ಯವಹಾರ, ತಪ್ಪಿತಸ್ಥರ ಮೇಲೆ ಕ್ರಮವಾಗಲಿ- ರೂಪಾಲಿ ಎಸ್.ನಾಯ್ಕ
ಕಾರವಾರ : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಮಗ್ರ ತನಿಖೆ ನಡೆದು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ.ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಕೆಲವರ ಬಂಧನವಾಗಿದೆ. ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ಸಚಿವ ಬಿ.ನಾಗೇಂದ್ರ ರಾಜೀನಾಮೆ ಘೋಷಿಸಿದ್ದಾರೆ. ಆದರೆ ಕೇವಲ ರಾಜೀನಾಮೆ ನೀಡಿದರೆ ಸಾಲದು. ಅವರನ್ನೂ ತನಿಖೆಗೊಳಪಡಿಸಬೇಕು. ಹಗರಣದ ಸಮಗ್ರ ತನಿಖೆ ನಡೆದು ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಅವರನ್ನೆಲ್ಲ ತನಿಖೆಗೊಳಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು.ಇದೊಂದು ಗಂಭೀರ ಪ್ರಕರಣವಾಗಿದೆ. ಹಣ ವರ್ಗಾವಣೆಯ ಹಿಂದೆ ಯಾರೆಲ್ಲ ಇದ್ದಾರೆ. ಹಣವನ್ನು ಯಾರು ಬಳಸಿದ್ದಾರೆ. ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಸತ್ಯಾಸತ್ಯತೆ ಹೊರಬರಬೇಕೆಂದು ಒತ್ತಾಯಿಸಿದ್ದಾರೆ.
Padmini ಪದ್ಮಿನಿ ಸಾವು : ಸಂಸದ ಹೆಗಡೆ ಸಂತಾಪ
ಶಿರಸಿ:ಉತ್ತರಾಖಂಡಕ್ಕೆ ಚಾರಣಕ್ಕೆ ಹೋದ ಸಂದರ್ಭದಲ್ಲಿ ಆದ ಹವಾಮಾನ ವೈಪರೀತ್ಯದ ಅವಘಡದಲ್ಲಿ ಶಿರಸಿ ತಾಲೂಕಿನ ಜಾಗನಳ್ಳಿ ಮೂಲದ ಪದ್ಮಿನಿ ಹೆಗಡೆ ಮೃತಪಟ್ಟಿರುವ ವಿಷಯ ತಿಳಿದು ತುಂಬಾ ನೋವಾಗಿದೆ ಎಂದು ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ. ಆಕೆಯ ತಾಯಿ ಶೈಲಜಾ ಹೆಗಡೆಯವರನ್ನು ಹಾಗೂ ಕುಟುಂಬಸ್ಥರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ತುಂಬಿ, ಸಾಂತ್ವನ ಹೇಳಿದ್ದೇನೆ. ಪದ್ಮಿನಿ ಅವರ ನಿಧನದ ನೋವನ್ನು ಸಹಿಸುವ ಶಕ್ತಿ ಆಕೆಯ ಕುಟುಂಬಕ್ಕೆ ದೊರೆಯಲಿ, ಪದ್ಮಿನಿ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ರಿಯಾಯಿತಿ ದರದಲ್ಲಿ ನೋಟ್ ಪುಸ್ತಕ ವಿತರಣೆಗೆ ಚಾಲನೆ
ದಾಂಡೇಲಿ :ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ನೋಟ್ ಬುಕ್ ವಿತರಣೆ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಇಂದು ಚಾಲನೆ ನೀಡಿದರು.15 ಸಾವಿರ ವಿದ್ಯಾರ್ಥಿಗಳಿಗೆ ಒಟ್ಟು 4,00,000, ನೋಟ್ ಬುಕ್ ವಿತರಣೆಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಸಿದ್ಧತೆ ನಡೆಸಿದೆ.ಮಾರುಕಟ್ಟೆ ದರದ ರೀತಿಯಲ್ಲಿ ಈ ವರ್ಷ ನೋಟ್ ಬುಕ್ ಗಳನ್ನು ಮತ್ತು ಕಿಂಗ್ ಸೈಜ್ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತಿದೆ. ಇದೇ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ, ಸಿಎಸ್ಆರ್ ಯೋಜನೆಯಡಿ ಸಾಕಷ್ಟು ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಹತ್ತು ಹಲವು ರೀತಿಯಲ್ಲಿ ಅನುದಾನಗಳನ್ನು ನೀಡುತ್ತಲೇ ಬಂದಿದೆ. ಇನ್ನೂ ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳೂ ದುಬಾರಿ ಮೊತ್ತದ ಪ್ರವೇಶ ಶುಲ್ಕವನ್ನು ಆಕರಣೆ ಮಾಡಿದರೂ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿಯ ಅನುದಾನವನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
.