ಕಾರವಾರ : ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನ ಎಂದು ಆದಾಯ ತೆರಿಗೆ ಇಲಾಖೆ ಹೇಳುತ್ತಿದ್ದು.ಇದರಿಂದಾಗಿ ಜನಸಾಮಾನ್ಯರು ಪಾನ್ ಕಾರ್ಡ್ ಗೆ ಆಧಾರ ಲಿಂಕ್ ಮಾಡಲು ಸೈಬರ್ ಸೆಂಟರ್ ಗಳಲ್ಲಿ ಮುಗಿ ಬಿಳುತ್ತಿದ್ದು, ಕೆಲ ಸೈಬರ್ ಸೆಂಟರ್ ಗಳಲ್ಲಿ ಭಾರೀ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ತೆರೆಗೆ ಇಲಾಖೆ ಮಾರ್ಚ್ 31ಕ್ಕೆ ಡೆಡ್ ಲೈನ್ ನೀಡಿರುವುದುದರಿಂದ ಎಲ್ಲರೂ ಈಗ ಲಿಂಕ್ ಮಾಡಿಸಿಕೊಳ್ಳಲು ಸೈಬರ್ ಸೆಂಟರ್ ಮೊರೆ ಹೋಗುತ್ತಿದ್ದಾರೆ. ಆದರೆ.ಸಿಕ್ಕಿದ್ದೆ ಹಬ್ಬ ಎಂದು ಕೊಂಡ ಕೆಲ ಸೈಬರ್ ಸೆಂಟರ್ ಮಾಲೀಕರು ಮನಸ್ಸಿಗೆ ಬಂದ ಹಾಗೆ ಹಣ ಪಡೆಯುತ್ತಿದ್ದಾರೆ ಎನ್ನುವ ಬಗ್ಗೆ ಎಲ್ಲೆಡೆಯಿಂದ ಆರೋಪ ಕೇಳಿ ಬರುತ್ತಿದೆ.
ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಲು ಹೋದ ಜನರಿಂದ ಸೈಬರ್ ಸೆಂಟರ್ ಮಾಲೀಕರು ಒಂದು ಸಾವಿರದಿಂದ ಒಂದುವರೆಗೆ ಸಾವಿರ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.ಈಗಾಗಲೆ ತೆರಿಗೆ ಇಲಾಖೆ ನಿಗದಿ ಪಡಿಸಿಸ ದಿನಾಂಕ ಮುಗಿದ ಮೇಲೆ ದಂಡ ನೀಡಬೇಕಾಗಿ ಬರಬಹುದು ಎಂದು ಹೇಳಿದೆ. ಆದರೆ ಈ ಸೈಬರ್ ಸೆಂಟರ್ ಗಳಲ್ಲಿ ತೆರಿಗೆ ಇಲಾಖೆ ನಿಗದಿ ಮಾಡಿರುವ ದಿನಾಂಕ ಮುಗಿಯುವ ಮುನ್ನವೆ ಹಣ ಪಡೆದುಕೊಳ್ಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸುತ್ತಾರೆ.