ಸುದ್ದಿಬಿಂದು ಬ್ಯೂರೋ
ಹೊನ್ನಾವರ : ಹಣದ ವಿಚಾರಕ್ಕೆ ಸಂಬಂಧಿಸಿ ಐವರು ಸೇರಿ ಇಬ್ಬರ ಮೇಲೆ‌ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಹಲ್ಲೆಗೆ ಒಳಗಾಗಿರುವ ಗಾಯಾಳುಗಳು ಆಸ್ಪತ್ರೆಗೆ ಸೇರಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಾಲೂಕಿನ ಚಿಕ್ಕನಕೊಡ್ ಗ್ರಾಪಂ ವ್ಯಾಪ್ತಿಯ ಹೆರಾವಲಿ ಬಡ್ನಕೋಡ ಎಂಬಲ್ಲಿ ನಡೆದಿದೆ.

ಹೆರಾವಲಿ ಬಡ್ನಕೋಡ ನಿವಾಸಿ ಪ್ರಶಾಂತ ಮಾರುತಿ ನಾಯ್ಕ,ಇಡಗುಂಜಿಯ ನಿವಾಸಿ ಯೋಗೇಶ‌ ನಾಯ್ಕ,ಹಳದೀಪುರದ ವಿನಾಯಕ ,ಹೆರಾವಲಿಯ ಜಗದೀಶ ಗೋವಿಂದ ನಾಯ್ಕ,ಕುಮಟಾ ಊರುಕೇರಿಯ ವಿಜು ನಾಯ್ಕ ಎಂಬುವವರೆ ಹಲ್ಲೆ ನಡೆಸಿದ ಐವರು ಆರೋಪಿತರಾಗಿದ್ದಾರೆ. ಕರ್ಕಿ ಮಠದ ಕೇರಿಯ ಮಹೇಶ ಲಕ್ಷ್ಮಣ ನಾಯ್ಕ ಎನ್ನುವವರು ಅವರ ಗೆಳೆಯರಾದ ಗುಣವಂತೆಯ ನವೀನ ಈಶ್ವರ ನಾಯ್ಕ ಎನ್ನುವವರನ್ನು ಬಡ್ನಕೋಡದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದು. ದೇವರಿಗೆ ಕೈ ಮುಗಿದು ನಂತರ ಅಲ್ಲಿಯೇ ಇದ್ದ ಆರೋಪಿತ ಪ್ರಶಾಂತ ನಾಯ್ಕ ಅವರ ಬಳಿ ನವೀನ ನಾಯ್ಕ ಅವರು ಹಣದ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಆರೋಪಿ‌ ಪ್ರಶಾಂತ್ ನಾಯ್ಕ ,”ಇಲ್ಲಿ ಮಾತನಾಡುವುದು ಬೇಡ” ಎಂದು ದೇವಸ್ಥಾನದ ಬೇರೆ‌ ಕಟ್ಟಡಕ್ಕೆ ಕರೆದೊಯ್ದಿದ್ದಾರೆ.ಈ ವೇಳೆ ಐವರು ಆರೋಪಿತರು ಸೇರ ನವೀನ್ ನಾಯ್ಕ ಅವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. “ಕೊಡಬೇಕಾದ ಹಣ ದೇವರಿಗೆ ಬಿಟ್ಟುಬಿಡು ಮತ್ತೆ ಹಣ ಅಂತಾ ಕೇಳಿದರೆ ನಿನ್ನ ಹೆಣ ಹಾಕುತ್ತೇವೆ” ಎಂದು ನವೀನ್ ನಾಯ್ಕ ಎಂಬಾತನ ತಳ್ಳಿ ರೀಪಿನ ತುಂಡಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ತಪ್ಪಿಸಲು ಹೋಗಿದ್ದ ಮಹೇಶ ನಾಯ್ಕ ಮೇಲೂ ಹಲ್ಲೆ ನಡೆಸಿದೆ.ದೀಪದ ಗುಡ್ನದಿಂದ,ದೊಣ್ಣೆಯಿಂದ ನವೀನನ ಮೇಲೆ ಹಲ್ಲೆ ಮಾಡಿದ್ದಾರೆ.

ಇನ್ನೂ ಗಾಯಗೊಂಡಿದ್ದ‌ ನವೀನ್‌ ನಾಯ್ಕ ಅವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ‌ನೀಡಲಾಗಿದ್ದು, ಹಲ್ಲೆ‌ನಡೆಸಿರುವ ಐವರ ವಿರುದ್ಧ ಹೊನ್ನಾವರದ ಪೊಲೀಸ್ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ