www.suddibindu.in
ಗಂಡನಿಗೆ ಅನೈತಿಕ ಸಂಬಂಧ ಇದೆ ಎನ್ನುವ ಬಗ್ಗೆ ಅನುಮಾನಕ್ಕೆ ಒಳಗಾದ ಗೃಹಿಣಿಯೊಬ್ಬರು ಪೆಟ್ರೋಲ್ (Petrol) ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ (Bengalore) ಹುಳಿಮಾವಿನ (Hulimavu) ಅಕ್ಷಯನಗರದಲ್ಲಿ (Akshayanagara) ನಡೆದಿದೆ.

ಅನುಷಾ ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿಯಾಗಿದ್ದಾಳೆ. ಐದು ವರ್ಷದ ಹಿಂದೆ ಶ್ರೀಹರಿ ಎಂಬಾತನನ್ನು ವಿವಾಹವಾಗಿದ್ದಳು, ಸದ್ಯ ದಂಪತಿಗೆ ಎರಡು ವರ್ಷದ ಮಗು ಇದೆ. ಎರಡು‌ ದಿನದ ಹಿಂದೆ ಈ ಘಟನೆ ನಡೆದಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಪತಿ ಶ್ರೀಹರಿಗೆ ಇನ್ನೊಂದು ಹೆಣ್ಣಿನ ಜೊತೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನ ಆಕೆಯನ್ನ ಕಾಡುತ್ತಿತ್ತು ಈ ಸಂಬಂಧ ಗಂಡ-ಹೆಂಡತಿ ನಡುವೆ ಗಲಾಡೆ ನಡೆದಿತ್ತು ಎನ್ನಲಾಗಿದೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವಾಗಲು ವಾಟ್ಸಾಪ್ ಕಾಲ್
ಗಂಡನಿಗೆ ವಾಟ್ಸಪ್ ಕಾಲ್ ಮಾಡುತ್ತಲೇ ಬೆಂಕಿ ಅನುಷಾ ಬೆಂಕಿ ಹಚ್ಚಿಕೊಂಡಿದ್ದಾಳೆ. ಬೆಂಕಿ ಹಚ್ಚಿಕೊಳ್ಳೋದು ನೋಡಿದ್ರೂ ಶ್ರೀಹರೊ ಆಕೆಗೆ ಆತ್ಮಹತ್ಯೆ ಮಾಡಿಕೊಳ್ಳ ಬೇಡ ಅಂತಾ ಕೂಡ ಹೇಳಿಲ್ಲ, ನನಗೆ ಬೇರೆ ಸಂಬಂಧ ಇದೆ ನನ್ನ ಬಿಟ್ಟು ಬಿಡು ಅಂತ ಮೂರು ತಿಂಗಳಿನಿಂದ ಡಿವರ್ಸ್ ಕೊಡುವಂತೆ ಪೀಡಿಸುತ್ತಿದ್ದ. ಮೃತ ಅನುಷಾಳ ಅಕ್ಕ ಉಷಾ ಈ ಎಲ್ಲಾ ವಿಚಾರವನ್ನ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ

.