ವಿಶ್ವದ ಅತೀ ಹೆಚ್ಚು ಬೇಡಿಕೆ ಸ್ಮಾರ್ಟ್‌ಫೋನ್ ಹಾಗೂ ಗ್ಯಾಜೆಟ್ಸ್ ಅನ್ನೋ ಹೆಗ್ಗಳಿಕೆಗೆ ಆ್ಯಪಲ್ ಕಂಪನಿ ಪಾತ್ರವಾಗಿದೆ. ಗುಣಮಟ್ಟ, ಸುರಕ್ಷತೆ ಸೇರಿದಂತೆ ಹಲವು ವಿಚಾರಗಳಲ್ಲಿ ಐಫೋನ್ ಮುಂಚೂಣಿಯಲ್ಲಿದೆ. ಆ್ಯಪಲ್ ಹೊಸ ಹೊಸ ಐಫೋನ್‌ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ತನ್ನ ಬೇಡಿಕೆ ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ.

ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶದಲ್ಲಿನ ಸ್ಮಾರ್ಟ್‌ಫೋನ್ ಪ್ರಿಯರು,ಗ್ಯಾಜೆಟ್ ಪ್ರಿಯರು ಸೆಪ್ಟೆಂಬರ್ ತಿಂಗಳು ಬಂದಾಗ ಅಲರ್ಟ್ ಆಗುತ್ತಾರೆ. ಕಾರಣ ಆ್ಯಪಲ್ ಐಫೋನ್ ಸೇರಿದಂತೆ ಇತರ ಪಮುಖ ಪ್ರಾಡಕ್ಟ್‌ಗಳು ಸೆಪ್ಟೆಂಬರ್ ತಿಂಗಳಲ್ಲೇ ಬಿಡುಗಡೆಯಾಗುತ್ತವೆ. ಆ್ಯಪಲ್ ಪ್ರತಿ ಭಾರಿ ಐಫೋನ್ ಬಿಡುಗಡೆಯನ್ನು ಸೆಪ್ಟೆಂಬರ್ ತಿಂಗಳಲ್ಲೇ ಬಿಡುಗಡೆ ಮಾಡುತ್ತದೆ.

ಆ್ಯಪಲ್ ಐಫೋನ್‌ 14 ಫ್ಲಿಪ್‌ಕಾರ್ಟ್‌ನಲ್ಲಿ ಜಸ್ಟ್‌ 34,399 ರೂ.ಗಳಲ್ಲಿ ಲಭ್ಯವಿದೆ. ಅಂದರೆ ಆ್ಯಪಲ್ ಹೊಸ iPhone 15 ಅನ್ನು ಭಾರತದಲ್ಲಿ ರೂ 79,900 ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಹೊಸ ಆ್ಯಪಲ್ ಐಫೋನ್‌ 15 ಸ್ವಲ್ಪ ವಿಭಿನ್ನ ವಿನ್ಯಾಸ (Design), ಉತ್ತಮ ಕ್ಯಾಮೆರಾ, ವೇಗದ ಪ್ರೊಸೆಸರ್ ಮತ್ತು USB-C ಪೋರ್ಟ್‌ನೊಂದಿಗೆ ಬರುತ್ತದೆ.

ಆ್ಯಪಲ್ ಐಫೋನ್‌ 15 ಬಿಡುಗಡೆಯಾದ ನಂತರ ಆ್ಯಪಲ್ ಐಫೋನ್‌ 14 ಭಾರಿ ಬೆಲೆ ಕಡಿತವನ್ನು ಪಡೆಯಿತು. ಆ್ಯಪಲ್ ಐಫೋನ್‌ 14 ಈಗ Apple ಸ್ಟೋರ್‌ನಲ್ಲಿ 69,900 ರೂಗಳಲ್ಲಿ ಲಭ್ಯವಿದೆ. ಆದಾರೆ ಫೋನ್ Flipkart ನಲ್ಲಿ ಹೆಚ್ಚು ಅಗ್ಗವಾಗಿದೆ. ಆ್ಯಪಲ್ ಐಫೋನ್‌ 14 ಅನ್ನು ಕಳೆದ ವರ್ಷ ಆ್ಯಪಲ್ ಐಫೋನ್‌ 14 Pro ಮತ್ತು Plus ಜೊತೆಗೆ ರೂ 79,900 ಆರಂಭಿಕ ಬೆಲೆಗೆ ಬಿಡುಗಡೆ (Release) ಮಾಡಲಾಯಿತು. ಆ್ಯಪಲ್ ಐಫೋನ್‌ 14 ನ 256GB ಮತ್ತು 512GB ಸ್ಟೋರೇಜ್ ರೂಪಾಂತರಗಳು ಈಗ ಕ್ರಮವಾಗಿ 79,900 ಮತ್ತು 99,900 ರೂ. ಆ್ಯಪಲ್ ಐಫೋನ್‌14 ಅನ್ನು ಪ್ರಸ್ತುತ 64,999 ರೂಗಳಲ್ಲಿ ಪಟ್ಟಿ ಮಾಡಲಾಗಿದೆ.