Scuba Diving in Netrani, Murudeshwar,
suddibindu.in
Bhatkala:ಭಟ್ಕಳ :ಉತ್ತರಕನ್ನಡ(uttarkannada) ಜಿಲ್ಲೆಯ ಮುರುಡೇಶ್ವರದ ನೇತ್ರಾಣಿಯಲ್ಲಿ ಕಳೆದ ಅನೇಕ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದ ಒಂದೇರಡು ಕಂಪನಿಗೆ ಜಿಲ್ಲಾಡಳಿತ ಟೆಂಡರ್ ಮುಗಿದಿರುವ ನೆಪವೊಡ್ಡಿ ಸ್ಕೂಬಾ ಡೈವಿಂಗ್( Scuba Diving)ತಡೆಹಿಡಿದಿತ್ತು.ಈ ಬಗ್ಗೆ ಆ ಒಂದು ಕಂಪನಿ ನ್ಯಾಯಾಲಯದ ಮೊರೆಹೋಗಿದ್ದು,ಇದೀಗ ಮುಂದಿನ ಟೆಂಡರ್ ಕರೆದು ಕಾರ್ಯಾದೇಶ ನೀಡುವವರೆಗೆ ಯಾರೂ ಕೂಡ ಸ್ಕೂಬಾ ಡೈವಿಂಗ್ ಮಾಡದಂತೆ ನ್ಯಾಯಾಲಯ (Nethrani) ತಡೆಯಾಜ್ಞೆಯನ್ನು ನೀಡಿದೆ.
ಈ ಹಿಂದೆ ಒಂದೇ ಕಂಪನಿಗೆ ನೆರವಾಗುವಂತೆ ಟೆಂಡರ್ ಕರೆದು,ಉಳಿದ ಕಂಪನಿಗಳನ್ನು ಯಾಮಾರಿಸಲಾಗಿತ್ತು. ಇತ್ತಿಚಿಗೆ ಮತ್ತೊಂದು ಟೆಂಡರ್ ಕರೆದಾಗ ಈ ಮೊದಲು ನೆರವು ಪಡೆದುಕೊಂಡಿದ್ದ ವ್ಯಕ್ತಿ ಬಿಡ್ಡಿಂಗ್ ಮಾಡದೇ ತಾಂತ್ರಿಕ ದೋಷದ ನೆವವೊಡ್ಡಿ ಟೆಂಡರ್ ಪ್ರಕ್ರೀಯೆಗೆ ಪದೇ ಪದೇ ಅಡ್ಡಗಾಲು ಹಾಕುತ್ತಿದ್ದ.ಇದನ್ನು ಪರಿಶೀಲಿಸಿದ ಘನ ನ್ಯಾಯಾಲಯ ಎಲ್ಲಾ ಸ್ಕೂಬಾ ಡೈವಿಂಗ್ ಚಟುವಟಿಕೆಗೆ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ:-
- “ಐ ಲವ್ ಯು” ಅಂತಾ ಹೇಳುವುದು ಲೈಂಗಿಕ ಉದ್ದೇಶವಲ್ಲ/ಹೈಕೋರ್ಟ್
- ವಾಯುವ್ಯ ಕರ್ನಾಟಕ ಸಾರಿಗೆ ಶಿರಸಿ ವಿಭಾಗದಲ್ಲಿ ಚಾಲಕರ ನೇಮಕಾತಿಗೆ ಅರ್ಜಿ ಆಹ್ವಾನ
- 21 ವರ್ಷ ಪೂರೈಸಿದ ಆರ್.ವಿ. ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ : ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿ.!
ಅಲ್ಲದೇ ರಾಜ್ಯದ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಲಯ ಛೀಮಾರಿ ಹಾಕಿದೆ. ಹಾಗೇ ಮುಂದಿನ ಟೆಂಡರ್(Tender) ಪ್ರಕ್ರಿಯೇಯನ್ನು ಪಾರದರ್ಶಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದೆ.ಆದರೆ ಇದುವರೆ ಸುಗಮವಾಗಿ ನಡೆದುಕೊಂಡು ಬರುತ್ತಿದ್ದ ಸ್ಕೂಬಾ ಡೈವಿಂಗ್ಗೆ ಜಿಲ್ಲಾಡಳಿತ ತರಾತೂರಿಯಲ್ಲಿ ಅಂದು ತೆಗೆದುಕೊಂಡ ತೀರ್ಮಾನದಿಂದಾಗಿ ಇಂದು ಜಿಲ್ಲೆಗೆ ಬರುವ ಅದೆಷ್ಟೋ ಪ್ರವಾಸಿಗರು ಸ್ಕೂಬಾ ಡೈವಿಂಗ್ ಮಾಡಲಾಗದೆ ಮುಂದಿನ ಆದೇಶ ಬರುವವರಗೆ ಕಾಯಬೇಕಾಗಿದೆ….