ಸುದ್ದಿಬಿಂದು ಬ್ಯೂರೋ
ಅಂಕೋಲಾ
: ಕಾಂಗ್ರೆಸ್ ಗ್ಯಾರಂಟಿ ಆನಲೈನ್ ಅರ್ಜಿ ತುಂಬುವ ಮೊದಲೇ ಅಂಕೋಲಾ ಪಟ್ಟಣದಲ್ಲಿ ಸೈಬರ್ ಸೆಂಟರಗಳಿಂದ ಬಡ ಜನರ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ನೂತನ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಸರಕಾರ ಈಗಾಗಲೇ ಸೇವಾಸಿಂಧೂ ಪ್ರೋಟಲ್ ಮ‌ೂಲಕ ಅರ್ಜಿ ಸಲ್ಲಿಸಲು ತಿಳಿಸಿದ್ದು ಅರ್ಜಿ ಪಡೆಯುವ ಪ್ರಕ್ರಿಯೆ ಇನ್ನೇನು ಆರಂಭಿಸ ಬೇಕಿದೆ. ಆದರು ಕೇಲವು ಸೈಬರ್ ಸೆಂಟರನಲ್ಲಿ ಫಲಾನುಭವಿಗಳ ದಾಖಲಾತಿ ಪಡೆದು ಕಂಪ್ಯೂಟರಕೃತ ಅರ್ಜಿಯಲ್ಲಿ ಮಾಹಿತಿ ಪಡೆದು 200 ರಿಂದ 300 ರೂ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ನಂಬಿ ಜನರು ಕೂಡ ತಮ್ಮ ಕೆಲಸ ಕಾರ್ಯ ಬಿಟ್ಟು ಪಟ್ಟಣದ ಕಡೆ ಒಡಿ ಬರುತ್ತಿದ್ದಾರೆ. ಬಡ ಕೂಲಿ ಮಾಡುವ ಮಹಿಳೆಯರು ಇದರಲ್ಲಿ ಹೆಚ್ಚು ಕಂಡು ಬಂದಿದೆ. ಇದುವರೆಗು ಸರಕಾರ ಅರ್ಜಿ ಪಡಿಯುವುದು ಆರಂಭಿಸಿಲ್ಲ ಆದರೆ ಈ ಸೈಬರಗಳಿಗೆ ಅರ್ಜಿ ಪಡೆಯಲು ಯಾರು ಅನುಮತಿಸಿದ್ದಾರೆ .ಇಲ್ಲವೇ ಇಲ್ಲಿಯ ಸಂಬಂಧಿಸಿದ ಅಧಿಕಾರಿಗಳಿಗೆ ಈ ವಿಷಯ ತಿಳಿದಿಲ್ಲವೇ ಎನ್ನುವುದು ಪ್ರಶ್ನೇಯಾಗಿದೆ.