ಕಾರವಾರ : ಮಾಸಿಕ ಬಸ್ ಪಾಸ್ ಪಡೆದು ಬಸ್ ನಲ್ಲಿ ಪ್ರಯಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಪಾಸ್ ನಡೆಯುವುದಿಲ್ಲ ಎಂದು ಹೇಳಿ ಆಕೆಯನ್ನ ಬಸ್ ನಿರ್ವಾಹಕ (ಕಂಡಕ್ಟರ್) ಓರ್ವ ಆಕೆಯನ್ನ ನಿರ್ಜನ ಪ್ರದೇಶದಲ್ಲಿ ಬಸ್ ನಿಂದ ಕೆಳಗಿಳಿಸಿ ಬಂದಿರುವ ಘಟನೆ ಮಾದನಗೇರಿ ಸಮೀಪ ನಡೆದೆ.
ಅಂಕೋಲಾ ತಾಲೂಕಾ ಪಂಚಾಯತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರು ಮಾದನಗೇರಿ ಮೂಲದ ಮಹಿಳೆ ಆಗಿದ್ದು, ಇಂದು ಸೋಮವಾರ ಬೆಳಿಗ್ಗೆ 9+45ರ ಸುಮಾರಿಗೆ ಅಂಕೋಲಾ ಕಚೇರಿಗೆ ಬರಲು ಮಾದನಗೇರಿಯಲ್ಲಿ ಕುಮಟಾ,ಕಾರವಾರ ಬಸ್ ka 31-F 1400 ಬಸ್ ಹತ್ತಿದ್ದರು.

ಅವರ ಪಾಸ್ ಪರಿಶೀಲನೆ ಮಾಡಿದ ನಿರ್ವಾಹಕ ಈ ಪಾಸ್ ನಡೆಯುದಿಲ್ಲವೆಂದು ಆಕೆಗೆ ಹೇಳಿದ್ದು, ಬಳಿಕ ಆ ಮಹಿಳೆ ಪಾಸ್ ನಡೆಯದೆ ಇದ್ದರೆ ಹಣ ಕೊಡುತ್ತೇನೆ ಟಿಕೇಟ್ ತೆಗುದು ಪ್ರಯಾಣಕ್ಕೆ ಅವಕಾಶ ನೀಡಿ ಎಂದಿದ್ದಾರೆ. ಅದಕ್ಕೂ ಆತ ಒಪ್ಪಿಕೊಂಡಿಲ್ಲ. ಹಾಗಾದ್ರೆ ಆಂದ್ಲೆ ಕ್ರಾಸ್ ಗೆ ಆದರೂ ಇಳಿಸಿ. ಇಲ್ಲ ನಿರ್ಜನ ಪ್ರದೇಶದ ಎಂದು ಹೇಳಿದ್ದಾಳೆ.

ಆದರೆ ನಿರ್ವಾಹಕ ಓರ್ವ ಮಹಿಳೆಗೆ ಗೌರವ ನೀಡದೆ ಆಕೆಗೆ ಬೈದು ಆಕೆಯನ್ನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ. ಆ ಮಹಿಳೆ ಇದೆ ತಿಂಗಳ 8ರಂದು ತನ್ನ ಮಾಸಿಕ ಪಾಸ್ ರಿನಿವಲ್ ಮಾಡಿಸಿಕೊಂಡಿದ್ದು, ಏಪ್ರಿಲ್ ಏಳರವರಗೆ ಪಾಸ್ ಚಲಾವಣೆಯಲ್ಲಿ ಇರಲಿದೆ.

ಈ ಮಹಿಳೆ ಕಳೆದ ಎರಡು ವರ್ಷದಿಂದ ಮಾಸಿಕ ಪಾಸ‌ ನಲ್ಲೆ‌ ನಿತ್ಯವೂ ಮಾದನಗೇರಿಯಿಂದ ಅಂಕೋಲಾಕ್ಕೆ ಓಡಾಟ ಮಾಡುತ್ತಿದ್ದು, ಅವರು ಹೊರಡು ಸಮುಯಕ್ಕೆ ಯಾವ ಬಸ್ ಸಿಗುತ್ತದೆ ಆ ಬಸ್ ಹತ್ತಿಕೊಂಡು ಬರುತ್ತಿದ್ದಾರೆ.ಆದರೆ ಆದರೆ ಇದುವರೆಗೆ ಯಾವುದೇ ಬಸ್ ನಲ್ಲಿ ಪ್ರಯಾಣ ಮಾಡಿದರು ಇತಂಹ ಅನುಭವ ಆಗಿಲ್ಲ‌ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಈ ಬಗ್ಗೆ ಸಾರಿಗೆ ಇಲಾಖೆಯ ಮೇಲಾಧಿಕಾರಿ ಪರಿಶೀಲ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕಿದೆ.