ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋ ಕಳ್ಳರು ಮತ್ತೆ ಬಾಲ ಬಿಚ್ಚಿದ್ದಾರೆ. ರಾತ್ರಿಯಾಗುತ್ತಿದ್ದಂತೆ ನಗರ,ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗೋ ಕಳ್ಳರು ತಮ್ಮ ಕೈಚಳಕ ಮುಂದುವರೆಸಿದ್ದಾರೆ. ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಗೋ ಕಳ್ಳತನ ಮಾಡಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರವಾರ ತಾಲೂಕಿನ ಮಾಜಾಳಿಯ ಜಗದೀಶ್ ಗುರವ ಅಂಗಡಿ ಬಳಿ ರಾತ್ರಿ ವೇಳೆ ಮಲಗಿದ್ದ ಗೋವುಗಳ ಮೇಲೆ ಟಾರ್ಗೆಟ್ ಮಾಡಿದ ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿರಿ ಕಾರನಲ್ಲಿ ಬಂದು ಯಾವುದೇ ಭಯವಿಲ್ಲದೆ ಗೋವುಗಳನ್ನ ಹಿಂಸಾತ್ಮಕವಾಗಿ ಕಾರಿನಲ್ಲಿ ತುಂಬಿ ಸಾಗಾಗಿಸಿದ್ದಾರೆ. ಕಳ್ಳರನ್ನ ಕಂಡ ಒಂದಿಷ್ಟು ಜಾನುವಾರುಗಳು ಓಡಿ ಹೋಗಿವೆ.ಕಳೆದ ಅನೇಕ ವರ್ಷಗಳಿಂದಲ್ಲೂ ಜಿಲ್ಲೆಯಲ್ಲಿ ಗೋ ಕಳ್ಳರು ಆಗಾಗ ತಮ್ಮ ಕೈಚಳ ತೋರಿಸುತ್ತಲ್ಲೆ ಬರುತ್ತಿದ್ದಾರೆ. ಅವರು ನಡೆಸುವ ಕೃತ್ಯಗಳು ಇದೆ ರೀತಿ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗತ್ತಾ ಇದ್ದರು..ಸರಿಯಾಗಿ ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲ.

ಕಳೆದ ಕೆಲ ದಿನಗಳಿಂದ ಜಿಲ್ಲೆಯ ಬೇರೆ ಬೇರೆ ಭಾಗದಲ್ಲಿ ಜಾನುವಾರು ಕಳ್ಳತವಾಗುತ್ತಿರುವ ಬಗ್ಗೆ ವರದಿಯಾಗುತ್ತಲೆ ಇದೆ. ಆದರೆ ಚಾಲಾಕಿ ಕಳ್ಳರು ಮಾತ್ರ ತಪ್ಪಿಸಿಕೊಳ್ಳುತ್ತಲೆ ಸಾಗಿದ್ದಾರೆ.ಹೆದ್ದಾರಿಯ ಎಲ್ಲಾ ಕಡೆಯಲ್ಲಿಯೂ ಸಹ ಚೆಕ್ ಪೊಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಗೋ ಕಳ್ಳರು ಮಾತ್ರ ಕಣ್ಣಿಗೆ ಕಾಣದಂತೆ ಮಾಯವಾಗುತ್ತಿರುವುದು ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಹಾಗಾದ್ರೆ ರಾತ್ರಿ ವೇಳೆ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಉಂಟಾಗುತ್ತಿರುವ ಅಡೆತಡೆಗಳು ಏನು ಎನ್ನುವ ಬಗ್ಗೆ ಸಂಬಂಧಿಸಿದವರೆ ಉತ್ತರಿಸಬೇಕಿದೆ.ಈ ಬಗ್ಗೆ ಪೊಲೀಸರು ಇನ್ನಷ್ಟು ಕಟ್ಟೆಚರ ವಹಿಸುವ ಮೂಲಕ ಗೋ ಕಳ್ಳರನ್ನ ಬಂಧಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ