ಸುದ್ದಿಬಿಂದು ಬ್ಯೂರೋ
ಕಾರವಾರ
: ಪ್ಯಾರಲಿಸೀಸ್ ಆಗದ ಮಹಿಳೆಗೂ ಪ್ಯಾರಲಿಸೀಸ್ ಇಂಜೆಕ್ಷನ್ ಕೊಟ್ಟ ಪರಿಣಾಮವಾಗಿ ಬದುಕಿ ಬಾಳಬೇಕಾಗಿದ್ದ ಕೊಪ್ಪಳ ಮೂಲದ ಮಹಿಳೆ ಸಾವನ್ನಪ್ಪಿರುವ ಘಟನೆ ಹಳಗಾದ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ನಡೆದಿದೆ.

ಸ್ವಪ್ನ ರಾಯ್ಕರ್ (32) ಮೃತಪಟ್ಟ ಮಹಿಳೆಯಾಗಿದ್ದಾಳೆ. ಈಕೆಯ ತಂದೆಗೆ ಪ್ಯಾರಲಿಸೀಸ್ ಉಂಟಾಗಿತ್ತು ಎನ್ನಲಾಗಿದ್ದು,‌ ಅವರಿಗೆ ಇಂಜೆಕ್ಷನ್ ‌ಕೊಡಿಸಲು ಆಕೆ ಕೊಪ್ಪಳದಿಂದ ಅವರ ಜೊತಗೆ ಹಳಗಾಕ್ಕೆ ಬಂದಿದ್ದಳು ಎನ್ನಲಾಗಿದೆ. ಆಸ್ಪತ್ರೆಗೆ ಬಂದಾಗ ಆಕೆ ತಮಗೆ ಬೆನ್ನು ನೋವು ಇದೆ ಎನ್ನುವ ಬಗ್ಗೆ ಅಲ್ಲಿನ ವೈದ್ಯರ ಬಳಿ ಹೇಳಿಕೊಂಡಿದ್ದಾಳಂತೆ. ಅದಕ್ಕೆ ಆ ವೈದ್ಯ ನೀವು ಈ ಒಂದು ಇಂಜೆಕ್ಷನ್ ತೆಗೆದುಕೊಳ್ಳಿ ಮುಂದೆ ನಿಮ್ಮಗೆ ಯಾವ ನೋವು ಕಾಣಿಸಿಕೊಳ್ಳುವುದಿಲ್ಲ. ಎಂದು ಹೇಳಿ ಆಕೆಗೆ ಇಂಜೆಕ್ಷನ್ ‌ಕೊಡಿಸಿದ್ದಾರಂತೆ. ಆಕೆ‌ ಸಹ ಸತ್ಯ ಇರಬಹುದು ಅಂತಾ ವೈದ್ಯರ ಮಾತು‌ಕೇಳಿ ಇಂಜೆಕ್ಷನ್ ತೆಗೆದಕೊಂಡಿದ್ದೆ ತಡ ಸ್ವಲ್ಪ ಸಮಯದಲ್ಲೆ ಆಕೆ ಮೃತ ಪಟ್ಟಿದ್ದಾಳೆ.

ಪ್ಯಾರಲಿಸೀಸ್ ಗೆ ಇಂಜೆಕ್ಷನ್ ಕೊಡುವ ಆಸ್ಪತ್ರೆ ಇದಾಗಿದ್ದು, ರಾಜ್ಯ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಇಂಜೆಕ್ಷನ್ ತೆಗೆದುಕೊಳ್ಳಲು ಇಲ್ಲಿಗೆ ಜ‌ನ‌ ಬರುತ್ತಾರೆ. ಆದರೆ ಈ ಮಹಿಳೆಗೆ ಪ್ಯಾರಲಿಸೀಸ್‌ ಇಲ್ಲದೆ ಇರುವಾಗಲು ಅಲ್ಲಿನ ‌ವೈದ್ಯದ್ಯರು ಅದು ಹೇಗೆ ಆಕೆಗೆ ಇಂಜೆಕ್ಷನ್‌ ಕೊಟ್ಟಿದ್ದಾರೆ ಎನ್ನುವದು ಈಗ ಎಲ್ಲರ ಪ್ರಶ್ನೆಯಾಗಿದೆ. ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.