ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು:ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಸಚಿವ ಸಂಪುಟ ಬದಲಾವಣೆ ಆಗಲಿದೆ ಎನ್ನುವ ವಿಚಾರ ಮುನ್ನೆಲೆಗೆ ಬರುತ್ತಿದ್ದ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ದೆಹಲಿಗೆ ತೆರಳಲಿದ್ದಾರೆ. ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್‌ ವೈದ್ಯ ಅವರ ಸ್ಥಾನ ಭದ್ರವಾಗಿದ್ದು,ಅವರೆ ಸಚಿವರಾಗಿ ಮುಂದುವರೆಯಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಚಿವ ಸಂಪುಟ ಬದಲಾಬಣೆ ಬಗ್ಗೆ ಇದುವರಗೆ ಕಾಂಗ್ರೇಸ್ ಹೈಕಮಾಂಡ ಯಾವುದೇ ತೀರ್ಮಾನಕ್ಕೂ ಬಂದಿಲ್ಲ ಎನ್ನಲಾಗಿದ್ದು,ಆದರೆ ಈ ನಡುವೆ ಸಚಿವ ಸಂಪುಟ ಬದಲಾವಣೆ ಆಗಲಿದೆ ಎನ್ನುವ ಬಗ್ಗೆ ಉಹಾಪೋಹಗಳು ಕೇಳಿ ಬರುತ್ತಿದ್ದು, ಆದರೆ ಪಕ್ಷದಲ್ಲಿ ಈ ರೀತಿ ಯಾವುದೇ ಚರ್ಚೆಗಳು ನಡೆದಿಲ್ಲ ಎನ್ನಲಾಗಿದೆ. ಈಗಾಗಲೇ ರಾಜ್ಯದ ಮೂರು ಕ್ಷೇತ್ರದಲ್ಲಿಯೂ ಸಹ ಕಾಂಗ್ರೇಸ್ ಅಭ್ಯರ್ಥಿಗಳೆ ಗೆದ್ದಿರುವುದರಿಂದ ಸದ್ಯ ಈ ವಿಚಾರ ಹೈಕಮಾಂಡನಲ್ಲಿ ಮಟ್ಟದಲ್ಲಿ ಇಲ್ಲ ಎನ್ನಲಾಗಿದೆ.

ಒಂದು ವೇಳೆ ಸಚಿವ ಸಂಪುಟ ಬದಲಾವಣೆ ಆಗುವುದು ಹೌದಾಗಿದಲ್ಲಿ.ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಂಕಾಳ್ ವೈದ್ಯ ಅವರನ್ನ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎನ್ನುವುದು ಖಚಿತವಾಗಿದೆ.ಈಗಾಗಲೇ ಸಚಿವ ಮಂಕಾಳ್ ವೈದ್ಯ ಅವರು ಇದೆ ಮೊದಲ‌ ಬಾರಿಗೆ ಕರಾವಳಿಯಲ್ಲಿ ಅದರಲ್ಲೂ ತನ್ನ ಕ್ಷೇತ್ರದಲ್ಲೇ ವಿಶ್ವ ಮೀನುಗಾರಿಕಾ ದಿನವನ್ನ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಹೈಕಮಾಂಡ ಮೆಚ್ಚುಗೆ ಪಡೆಯುವುದರ ಜೊತೆಗೆ ಕರಾವಳಿ ಜಿಲ್ಲೆಯ ಮೀನುಗಾರರ ಮನಸ್ಸು ಗೆದ್ದಿದ್ದಾರೆ.

ಇನ್ನೂ ಡಿಸಿಎಂ ಡಿಕೆ ಶಿವಕುಮಾರ ಸಹ ಮಂಕಾಳ್ ವೈದ್ಯ ಅವರ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ಸಹ ಹೊಂದಿದ್ದು,ಕರಾವಳಿ ಜಿಲ್ಲೆಯಲ್ಲಿ ಪ್ರಭಲವಾಗಿರುವ ಮೀನುಗಾರ ಸಮಾಜಕ್ಕೆ ಸೇರಿದ ಮಂಕಾಳ್ ವೈದ್ಯ ಅವರಿಗೆ ಇನ್ನು ಹೆಚ್ಚಿನ ಸ್ಥಾನ‌‌ ಮಾನ ನೀಡುವ ಮೂಲಕ ಅವರ ಮೂಲಕ ಆ ಸಮಾಜದ ಸಮಸ್ಯೆಗೆ ಸ್ಪಂಧಿಸುವದರ ಜೊತೆಗೆ ಇನ್ನೂಳಿದ ಹಿಂದೂಳಿದವರ ಬಲವರ್ಧನೆಗೆ ಸಹಕಾರಿ ಆಗಲಿದೆ ಎನ್ನುವ ನಿಟ್ಟಿನಲ್ಲಿ. ಸಚಿವ ಸಂಪುಟ ಬದಲಾವಣೆ ಆದರೂ ಕೂಡ ಮಂಕಾಳ್ ವೈದ್ಯ ಅವರನ್ನ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎನ್ನಲಾಗಿದೆ.

ಸಚಿವ ಸಂಪುಟ ಸೇರಲಿರುವವರು.

ಒಂದು ವೇಳೆ ಸಚಿವ ಸಂಪುಟ ಬದಲಾವಣೆ ಆದಲ್ಲಿ ಯಾರೇಲ್ಲಾ ಸೇರಿಕೊಳ್ಳಬಹುದು ಎನ್ನುವ ಪಕ್ಕಾ ಮಾಹಿತಿ ಇಲ್ಲಿದೆ.ಬೆಂಗಳೂರಿನ ವಿಜಯನಗರದ ಶಾಸಕ ಎಂ. ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಬಿ. ನಾಗೇಂದ್ರ, ಮೈಸೂರಿನ ತನ್ವೀರ್ ಸೇಠ್, ಹಾಲಿ ಆಹಾರ ಸಚಿವ ಕೆಎಚ್ ಮುನಿಯಪ್ಪನವರ ಪುತ್ರಿ ರೂಪಾ ಶಶಿಧರ್ (ಮುನಿಯಪ್ಪನವರ ಸ್ಥಾನಕ್ಕೆ), ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಮಾಗಡಿ ಶಾಸಕ ಸಿಎಚ್ ಬಾಲಕೃ,ಷ್ಣ, ಬೆಳಗಾವಿ ಭಾಗದ ಪ್ರಮುಖ ನಾಯಕ ಲಕ್ಷ್ಮಣ ಸವದಿ ಅವರುಗಳ ಹೆಸರು ಕೇಳಿಬರುತ್ತಿದೆ.

ಈ ಕೆಳಗಿನ ಸುದ್ದಿಯನ್ನ ಗಮನಿಸಿ