A.R.M’ 3D ವಿಶ್ವದಾದ್ಯಂತ ಯಶಸ್ವಿಯಾಗಿ ಓಡುತ್ತಿದ್ದು ಚಿತ್ರಕ್ಕೆ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏಳು ದಿನಗಳಲ್ಲಿ, ARM ಚಿತ್ರ ಪ್ರಪಂಚದಾದ್ಯಂತ 67 ಕೋಟಿ ರೂ.ಗೂ ಹೆಚ್ಚು ಬಾಚುವಲ್ಲಿ ಯಶಸ್ವಿಯಾಗಿದೆ.

ಸೆಪ್ಟೆಂಬರ್ 20 ರಂದು ಟಿಕೆಟ್ ದರ ಕೇವಲ ರೂ. 99 ಮಾತ್ರ ಇರುತ್ತದೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಆಫರ್ ದೇಶಾದ್ಯಂತ 4,000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಅನ್ವಯಿಸುತ್ತದೆ. IMAX, 4DX ಮತ್ತು ರಿಕ್ಲೈನರ್‌ ಗಳನ್ನು ಹೊಂದಿರುವ ಥಿಯೇಟರ್‌ ಗಳಲ್ಲಿ ಈ ಕೊಡುಗೆ ಅನ್ವಯಿಸುವುದಿಲ್ಲ.  ಐನಾಕ್ಸ್, ಸಿನಿಪೊಲಿಸ್, ಮಿರಾಜ್, ಸಿಟಿ ಪ್ರೈಡ್, ಏಷ್ಯನ್, ಮೂವಿ ಟೈಮ್, ಡಿಲೈಟ್ ಮುಂತಾದ ಥಿಯೇಟರ್ ಗಳಲ್ಲಿ ಈ ಆಫರ್ ಅನ್ವಯವಾಗಲಿದೆ ಎಂದು ಪಿವಿಆರ್ ಪ್ರಕಟಿಸಿದೆ. ಹೀಗಾಗಿ ARM ಸಿನಿಮಾ ಪ್ರಪಂಚದಾದ್ಯಂತ ಹೆಚ್ಚು ಟಿಕೆಟ್ ಬುಕ್ಕಿಂಗ್ ಆಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

ಎ.ಆರ್.ಎಂ ಮೂಲಕ ಟೊವಿನೋ ದೊಡ್ಡ ಯಶೋಗಾಥೆ ಬರೆಯುತ್ತಿದ್ದಾರೆ.ಚಿತ್ರಕ್ಕೆ ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಉತ್ತಮ ಕಲೆಕ್ಷನ್ ಬರುತ್ತಿದೆ. ಮಲಯಾಳಿ ಪ್ರೇಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಈ 3ಡಿ ಚಿತ್ರವನ್ನು ಓಣಂ ಸೀಸನ್‌ನಲ್ಲಿ ಪ್ರೇಕ್ಷಕರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಚಿತ್ರ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಯೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಬೇಟೆ ಮುಂದುವರೆಸಿದೆ. ‘ಇದೊಂದು ವಿಶ್ವದರ್ಜೆಯ 3ಡಿ ಅನುಭವ’ ಎಂದು ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದಾರೆ.

ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ ದೊಡ್ಡ ಬಜೆಟ್‌ ಸಿನಿಮಾ ಎನ್ನಲಾದ ಟೋವಿನ್‌ ಥಾಮಸ್‌ ನಟನೆಯ ಎಆರ್‌ಎಂ ಸಿನಿಮಾ ಮಲಯಾಳಂ ಚಿತ್ರರಂಗದಲ್ಲಿ ಹೀರೋಗಿರಿಯ ಸಿನಿಮಾಗಳಿಗೆ ಕಟ್ಟು ಬೀಳದೆ ತಮ್ಮದೇ ಆದ ಮಾದರಿಯಲ್ಲಿ ಸಿನಿಮಾಗಳನ್ನು ಮಾಡುತ್ತಿರುವ ಸ್ಟಾರ್ ನಟ ಟೋವಿನೊ ಥಾಮಸ್.. ಒಂದರ ಮೇಲೊಂದು ಹಿಟ್ ಸಿನಿಮಾ ನೀಡುವ ಜೊತೆಗೆ ಅಭಿಮಾನಿಗಳನ್ನೂ ಸಹ ಸಂಪಾದಿಸುತ್ತಿದ್ದಾರೆ.

ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಚಿತ್ರವನ್ನು ಮ್ಯಾಜಿಕ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಂ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಡಾ ಜಕರಿಯಾ ಥಾಮಸ್ ನಿರ್ಮಿಸಿದ್ದಾರೆ. ಚಿತ್ರವನ್ನು ಜಿತಿನ್ ಲಾಲ್ ನಿರ್ದೇಶಿಸಿದ್ದಾರೆ. ಸುಜಿತ್ ನಂಬಿಯಾರ್ ಚಿತ್ರಕಥೆ ಬರೆದಿದ್ದಾರೆ.

ಕೃತಿ ಶೆಟ್ಟಿ, ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಬಾಸಿಲ್ ಜೋಸೆಫ್, ಜಗದೀಶ್, ಹರೀಶ್ ಉತ್ತಮನ್, ಕಬೀರ್ ಸಿಂಗ್, ಪ್ರಮೋದ್ ಶೆಟ್ಟಿ ಮತ್ತು ರೋಹಿಣಿ ಕೂಡ ತಾರಾಗಣದಲ್ಲಿದ್ದಾರೆ.

ಗಮನಿಸಿ