ಸುದ್ದಿಬಿಂದು ಬ್ಯೂರೋ
ಕುಮಟಾ : ವಸತಿ ಶಾಲೆಯೊಂದರ ಸ್ವಚ್ಚತಾ ಸಿಬ್ಬಂದಿಗೆ ಅದೆ ಶಾಲೆಯ ವಾರ್ಡನ್ ಓರ್ವ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಇದೀಗ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ಮೀನು ಮಾರುಕಟ್ಟೆ ಸಮೀಪದಲ್ಲಿರುವ ಡಾ.ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಹಿಳೆ ಓರ್ವಳು ಕಳೆದ ಏಳು ವರ್ಷದಿಂದ ಹೊರ ಗುತ್ತಿಗೆ ಆಧಾರದಲ್ಲ ಸ್ವಚ್ಚತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತದ್ದಾಳೆ. ಆದರೆ ಅದೇ ಶಾಲೆಗೆ ಕಳೆದ ಮೂರು ವರ್ಷ ಹಿಂದಷ್ಟೆ ವಾರ್ಡನ್ ಆಗಿ ಬಂದಿರುವ ಶಂಕರ ಪೊಳೆ ಎಂಬಾತ ಕಳೆದ ಕೆಲ ದಿನಗಳಿಂದ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಸಂತ್ರಸ್ತ ಮಹಿಳೆ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಸಾಂತ್ವನ ಕೇಂದ್ರಕ್ಕೆ ವಾರ್ಡನ್ ವಿರುದ್ಧ ಆಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದರೂ ಸಹ ಯಾರೂ ಸಹ ಆ ಸಂತ್ರಸ್ತೆಯ ಬೆಂಬಲಕ್ಕೆ ಬಂದಿರಲ್ಲ ಹೀಗಾಗಿ ಇದೀಗ ನೊಂದ ಮಹಿಳೆ ನ್ಯಾಯಕ್ಕಾಗಿ ವಾರ್ಡನ್ ಶಂಕರ್ ಪೊಳೆ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ..
ಮಹಿಳೆಯಿಂದ ದೂರು ದಾಖಲಿಸಿಕೊಂಡ ಕುಮಟಾ ಪೊಲೀಸರು ಆತನ ವಿರುದ್ಧ ಕಲಂ 75,375(2) ಬಿ ಎನ್ ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದೂರಿನ ಸಾರಾಂಶ : ಮೀನು ಮಾರುಕಟ್ಟೆಯಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ ವಸತಿ ಶಾಲೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಸಿಬ್ಬಂದಿಯಾಗಿ ಕಳೆದ 7 ವರ್ಷಗಳಿಂದ ಕೆಲಸಮಾಡಿಕೊಂಡಿದ್ದು, ವಸತಿ ಶಾಲೆಯ ವಾರ್ಡನ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ ಎಸ್ ಪೋಕ್ ಪ್ರಾಯ: 30 ವರ್ಷ ವೃತ್ತಿ: ಡಾ.ಬಿ.ಆರ್ ಅಂಬೇಡ್ಕರ ವಸತಿ ಶಾಲೆ ವಾರ್ಡನ್ ವಿಳಾಸ: ಹುಬ್ಬಳ್ಳಿ ಈತನು ಕಳೆದ ಒಂದು ವರ್ಷದಿಂದ ಪಿರ್ಯಾದಿಯು ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವಾಗ ಬಂದು ತನ್ನೊಟ್ಟಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದು, ಈ ಬಗ್ಗೆ ಪಿರ್ಯಾದಿ ಆರೋಪಿತನಿಗೆ ನಿಮ್ಮ ವರ್ತನೆ ಸರಿ ಇಲ್ಲ. ಬದಲಾಯಿಸಿಕೊಳ್ಳಿ ಅಂತಾ ಹೇಳಿದ್ದರೂ ಮತ್ತೆ ಮತ್ತೆ ಪಿರ್ಯಾದಿಯ ಒಟ್ಟಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಈ ಬಗ್ಗೆ ಪಿರ್ಯಾದಿ ವಸತಿ ಶಾಲೆಯ ಪ್ರಾಂಶುಪಾಲರಿಗೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಉಪನಿದೇರ್ಶಕರು ಹಾಗೂ ಮಹಿಳಾ ಸಾಂತ್ವಾನ ಕೇಂದ್ರ ಕುಮಟಾರವರ ಬಳಿಗೆ ದೂರು ನೀಡಿದ್ದು ಆದಾಗ್ಯೂ ಆತನು ತನ್ನ ವರ್ತನೆಯನ್ನು ಸರಿ ಪಡಿಸಿಕೊಳ್ಳದೆ ಕಳೆದ ದಿನಾಂಕ 12-09-2024 ರಂದು ಬೆಳಗ್ಗೆ 10-00 ಗಂಟೆ ಸುಮಾರಿಗೆ ಪಿರ್ಯಾದಿ ವಸತಿ ಶಾಲೆಯ ಮಹಡಿ ಮೆಟ್ಟಿಲು ಹತ್ತಿರ ಕಸ ಗುಡಿಸುವಾದಗ ಪಿದ್ಯಾದಿಯ ಹಿಂದಿನಿಂದ ಬಂದು ಪಿರ್ಯಾದಿಯ ಸೊಂಟಕ್ಕೆ ಕೈ ಹಾಕಿ. ಕೈ ಹಿಡಿದು ಎಳೆದು ನೀನು ನನಗೆ ಸಹಕರಿಸದೇ ಇದ್ದರೆ ನಿನ್ನನ್ನು ಕೆಲಸದಿಂದ ತೆಗೆಸಿ ಹಾಕುತ್ತೇನೆ ಅಂತಾ ಹೇಳಿ ಅದಕ್ಕೆ ಪಿರ್ಯಾದಿ ಒಪ್ಪದಿದ್ದಾಗ ಈ ವಿಷಯವನ್ನು ಯಾರಿಗಾದರೋ ಹೇಳಿದರೆ ನಿನ್ನನು ಕೊಲೆ ಮಾಡಿ ನಾಪತ್ತೆ ಮಾಡುತ್ತೇನೆ ಅಂತಾ ಜೀವ ಹಾಕಿ ಹೋಗಿದ್ದು ಇರುತ್ತದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಮಹಿಳೆ ನೀಡಿರುವ ದೂರಿನಲ್ಲಿ ದಾಖಲಾಗಿದೆ..
ಗಮನಿಸಿ