ಸುದ್ದಿಬಿಂದು ಬ್ಯೂರೋ
ಶಿರಸಿ :
ಗ್ರಾಹಕರ ಸೋಗಿನಲ್ಲಿ ಬಂಗಾರದ ಅಂಗಡಿಗೆ ಬಂದ ಮೂವರು ಮಹಿಳೆಯರು ಲಕ್ಷಾಂತರ ರೂಪಾಯಿ ಬಂಗಾರ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಗರದ ಐದು ರಸ್ತೆಯಲ್ಲಿವ ಓಂಕಾರ ಜ್ಯುವೇಲರ್ಸನಲ್ಲಿ ನಡೆದಿದೆ.

ಈ ಮೂವರು ಕಳ್ಳೀಯರು ನಡೆಸಿದ ಕಳ್ಳತನದ ಕೃತ ಅಲ್ಲಿನ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳೀಯರು ಗದಗ ಮೂಲದವರು ಎಂದು ಗೋತ್ತಾಗಿದೆ. ಗ್ರಾಹಕರ ಸೋಗಿನಲ್ಲಿ ಬಂಗಾರದ ಅಂಗಡಿ ನುಗ್ಗಿದ ಚಾಲಾಕಿ ಮಹಿಳಾ ಕಳ್ಳಿಯರು ಅಂಗಡಿ ಮಾಲೀಕರ ಗಮನ‌ ಬೆರೆಡೆಗೆ ಸೆಳೆದು ತಾವು ತಂದಿದ್ದ ಚೀಲದಲ್ಲಿ ಬಂಗಾರ ತುಂಬಿಕೊಂಡು ಹೋಗಿದ್ದಾರೆ. ಇವರ ಬಂಧನದ ಬಳಿಕ ಇಷ್ಟು ಕೃತ್ಯ ಹೊರ‌ ಬರುವ ಸಾಧ್ಯತೆ ಇದೆ.

ಈ ಬಗ್ಗೆ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ. ರಾಜಕುಮಾರ ಹಾಗೂ ತನಿಖಾ ಪಿ.ಎಸ್.ಐ. ರತ್ನಾ ಕುರಿ ಅವರಿಂದ ತೀವ್ರಗೊಂಡ ತನಿಖೆ