ಸುದ್ದಿಬಿಂದು ಬ್ಯೂರೋ
ಶಿರಸಿ
: ಚಿನ್ನ ಖರೀದಿ ಸೋಗಿನಲ್ಲಿ ಬಂದು ಲಕ್ಷಾಂತರ ‌ರೂಪಾಯಿ ಚಿನ್ನ ದೋಚಿಕೊಂಡು ಹೋಗಿದ್ದ ಗದಗ ಮೂಲದ ಮೂವರನ್ನ ಇದೀಗ ಶಿರಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಖತರ್ನಾಕ್ ಕಳ್ಳಿಯರು ಗದಗ ಜಿಲ್ಲೆಯಿಂದ ಉತ್ತರಕನ್ನಡ ಜಿಲ್ಲೆಯ ಶಿರಸಿಗೆ ಬಂದಿದ್ದ ಇವರು ಚಿನ್ನಾಭರಣ ಖರೀದಿ ಮಾಡುವ ಸೋಗಿನಲ್ಲಿ ಬಂಗಾರದ ಅಂಗಡಿಗೆ ನುಗ್ಗಿ ಕಳ್ಳತನ ಕೃತ್ಯ ನಡೆಸಿದ್ದರು‌. ಕಳ್ಳಿಯರ‌ ಕೈಚಳ ಅಲ್ಲಿನ ಸಿಸಿ ಟಿವಿಯಲ್ಲಿ ಸಂಪೂರ್ಣ ಸೆರೆಯಾಗಿತ್ತು.

ಬಂಧಿತರು ಗದಗ ಜಿಲ್ಲೆಯ ಶೋಭಾಬಾಯಿ(63), ಹುಬ್ಬಳ್ಳಿ ಮೂಲದ ರಾಜೇಶ್ವರಿ (48), ಸಂಗೀತಾ (42) ಇವರೆ ಬಂಧಿತ ಆರೋಪಿಗಳಾಗಿದ್ದಾರೆ.
ಡಿಎಸ್ಪಿ ಕೆ.ಎಲ್. ಗಣೇಶ್ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಜಕುಮಾರ ಎಸ್. ಉಕ್ಕು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಚಿತ ಬಸ್‌ ಪ್ರಯಾಣ ಬಂಡವಾಳವಾಗತ್ತಾ ಇದೇಯಾ..?

ರಾಜ್ಯ ಕಾಂಗ್ರೆಸ್ ಸರಕಾರವೇನೋ ನುಡಿದಂತೆ ನಡೆದಿದೆ. ಆದರೆ ಈ ಉಚಿತ ಬಸ್ ಪ್ರಯಾಣ ಇಂತಹ ಖತರ್ನಾಕ್ ಕಳ್ಳಿಯರ ಪಾಲಿಗೆ ಬಂಡವಾಳ ಆಗತ್ತಾ ಇದೆ ಎನ್ನುವ ಚರ್ಚೆ ಇದೀಗ ಕೇಳಿ ಬರತ್ತಾ ಇದೆ. ಈ ಮೊದಲು ಈ ಕಳ್ಳಿಯರ ಟೀಂ ಆಯಾ ಭಾಗದ ಜಾತ್ರೆ, ಸಮಾವೇಶದಲ್ಲಿ ಮಾತ್ರ ತಮ್ಮ ಕೈಚಳ‌ ತೋರಿಸಿಕೊಳ್ಳತ್ತಾ ಇದ್ದರು. ಹೊರ ಜಿಲ್ಲೆಗೆ ಹೋಗಿ ತಮ್ಮ ಕಳ್ಳತನ ನಡೆಸಿದರೆ, ಬಸ್ ಟಿಕೇಟ್ ಗೂ ತುಟ್ಟಿಯಾಗತ್ತಾ ಇತ್ತು. ಹೀಗಾಗಿ ಈ ಮೊದಲು ಅವರ ಕೃತಗಳು ಆಯಾ ಜಿಲ್ಲೆಗೆ ಸಿಮೀತವಾಗಿ ಇರತ್ತಾ ಇತ್ತು. ಆದರೆ ಇದೀಗ ಮಹಿಳೆಯರು ರಾಜ್ಯದ ಯಾವ ಮೂಲೆಗೆ ಬೇಕಾದ್ರೂ ಉಚಿತವಾಗ ಪ್ರಯಾಣಿಸು ಅವಕಾಶ ಸಿಕ್ಕಿರುವ ಕಾರಣ, ಕಳ್ಳೀಯರ ಟೀಂ ರಾಜ್ಯಾದ್ಯಂತ ಕೃತ್ಯ ನಡೆಸಲು ಫೀಲ್ಡ್ ಗೆ ಇಳಿದಿರುವಂತೆ ಕಾಣುತ್ತಾ ಇದ್ದು ಇದಕ್ಕೆ ಶಿರಸಿ ಘಟನೆ ತಾಜಾ ಉದಾರಣೆ ಎಂದರು ತಪ್ಪಾಗಲಿಕ್ಕಿಲ್ಲ.