ಸುದ್ದಿಬಿಂದು ಬ್ಯೂರೋ
ಶಿರಸಿ : ಜನರನ್ನು ತಪ್ಪು ದಾರಿಗೆ ಕಳಿಸುವದಿಲ್ಲ. ಧರ್ಮ, ಜಾತಿ, ಕೋಮು ಸಂಘರ್ಷ ಮಾಡಿ ಮತ ಹಾಕಿಸಿಕೊಳ್ಳುವದಿಲ್ಲ. ಜನರಿಗೆ ಸುಳ್ಳು ಭರವಸೆ ನೀಡುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಹೇಳಿದರು.
ಶಿರಸಿ ಸಿದ್ದಾಪುರ ತಾಲೂಕಿನ ವಿವಿಧಡೆ ಕಾರ್ಯಕರ್ತರ, ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿದರು.ನಾನು ನಿಮ್ಮೊಂದಿಗೆ ಸದಾ ಇರಲು ಬಂದಿದ್ದೇನೆ. ಕೆಲಸ ಆದ ಮೇಲೆ ಓಡುವದಿಲ್ಲ. ಕೈಗೆ ಸಿಗುವದಿಲ್ಲ ಎಂಬ ಪ್ರಶ್ನೆ ಇಲ್ಲ ಎಂದ ಅವರು ಕ್ಷೇತ್ರದ ಸಮಸ್ಯೆಯ ಪೂರ್ಣ ಅರಿವಿದೆ. ಇ ಸ್ವತ್ತು, ಫಾರಂ ೩, ಅರಣ್ಯ ಅತಿಕ್ರಮಣ, ರೈತರ ಬವಣೆ, ಕಾರ್ಮಿಕರ ಕಷ್ಟ, ಕುಡಿಯುವ ನೀರಿನ ಸಮಸ್ಯೆ ಎಲ್ಲವುಗಳ ಅರಿವಿದೆ. ಮತದಾರರು ವಿಶ್ವಾಸವಿಟ್ಟು ಬಲ ನೀಡಿದರೆ ಎಲ್ಲ ಸಮಸ್ಯೆ ಬಗಿಹರಿಸುವ ಪ್ರಯತ್ನ ಮಾಡುತ್ತೇನೆ. ವಿಶ್ವಾಸಕ್ಕೆ ದ್ರೋಹ ಮಾಡುವದಿಲ್ಲ. ಆ ಗುಣವೂ ನನ್ನಲ್ಲಿ ಇಲ್ಲ ಎಂದರು.
ಈ ಬಾರಿಯ ಕಾಂಗ್ರೆಸ್ ಪ್ರಚಾರ ವೈಖರಿಗೆ ಅಬ್ಬರವಿಲ್ಲ. ಆದರೆ, ತಳ ಮಟ್ಟದಲ್ಲಿ ಎರೆ ಹುಳುವಿನಂತೆ ಕೆಲಸ ನಡೆಯುತ್ತಿದೆ. ಮತದಾರರ, ಕಾರ್ಯಕರ್ತರ ವಿಶ್ವಾಸಗಳಿಸಿ ಅಭಿವೃದ್ದಿಗೆ ಕಂಕಣ ತೊಡುವ ವಾಗ್ದಾನ ಮಾಡುತ್ತೇನೆ ಎಂದರು. ಕಾಂಗ್ರೆಸ್ ಸರಕಾರ ಇದ್ದಾಗ ನೀಡಿದ ಯೋಜನೆಗಳು, ಅಡಿಕೆ ಬೆಳೆಗಾರರ ಬೆಳೆ ಸಾಲ ಮನ್ನಾ, ಅಧಿಕ ಅಡಿಕೆ ಕೊಳೆ ಪರಿಹಾರ ಮತ್ತೆ ಸಿಗಲೇ ಇಲ್ಲ ಎಂಬ ನೋವಿನ ನುಡಿಗಳನ್ನು ಮತದಾರರ ಬೇಸರದಿಂದ ತೋಡಿಕೊಳ್ಳುತ್ತಿದ್ದಾರೆ. ಜನರ ಕಷ್ಟದ ಅರಿವಿರುವ ಕಾಂಗ್ರೆಸ್ ಗೆ ಕಷ್ಟ ಆಗದೇ ಸರಕಾರ ರಚಿಸಲು ಇಲ್ಲೂ ಬೆಂಬಲ ಕೊಡುವ ಸಂಕಲ್ಪ ಮಾಡುತ್ತಿದ್ದಾರೆ. ಮಹಿಳೆಯರೂ, ಯುವಕರೂ ಬಲವಾಗಿ ಬರುತ್ತಿದ್ದಾರೆ. ಬಂಗಾರಪ್ಪ ಅವರು ಕೊಟ್ಟ ಯೋಜನೆಗಳು, ಸಿದ್ದರಾಮಯ್ಯ ಅವರ ಸರಕಾರದ ಯೋಜನೆಗಳು ಇಂದಿಗೂ ಚಿರಸ್ಥಾಯಿ ಆಗಿದ್ದು, ಈಗ ಕಾಂಗ್ರೆಸ್ ಸರಕಾರ ಕೊಟ್ಟ ಗ್ಯಾರೆಂಟಿ ಯೋಜನೆಗಳು ಕೂಡ ನಮ್ಮ ಜನರಿಗೆ ನೆರವಾಗಲಿದೆ ಎಂಬ ವಿಸ್ವಾಸ ಇದೆ ಎಂದು ಭೀಮಣ್ಣ ಹೇಳಿದರು.
ಪ್ರಮುಖರಾದ ವಸಂತ ನಾಯ್ಕ, ಜಗದೀಶ ಗೌಡ, ಜಿ.ಪಂ
ಮಾಜಿ ಸದಸ್ಯ , ಎಸ್.ಆರ್.ಹೆಗಡೆ ಕುಂಬಾರಕುಳಿ, ಜಿ.ಎನ್.ಹೆಗಡೆ ಮುರೇಗಾರ, ಹಿರಿಯ ಸಹಕಾರಿ ಆರ್.ಎಂ.ಹೆಗಡೆ ಬಾಳೇಸರ, ದೀಪಕ ದೊಡ್ಡೂರು, ಎಸ್.ಕೆ.ಭಾಗವತ್ ಇತರರು ಸಭೆಯಲ್ಲಿ ಭಾಗವಹಿಸಿ, ಭೀಮಣ್ಣ ನಾಯ್ಕ ಅವರೆಂದರೆ ನಮ್ಮೊಂದಿಗೆ ಯಾವತ್ತೂ ಇದ್ದವರು. ಅವರ ಸಾಮಾಜಿಕ ಕಳಕಳಿ, ಕಾಳಜಿ, ಬಡವರಿಗೆ ಸ್ಪಂದಿಸುವ ವಿಧಾನ ಎಲ್ಲರಿಗೂ ಗೊತ್ತಿದೆ. ಅವರಿಗೆ ಅಧಿಕಾರ ನೀಡಿದರೆ ಇನ್ನಷ್ಟು ಪ್ರಾಮಾಣಿಕ ಹಾಗೂ ಅಧಿಕ ಜನಸೇವೆ ಮಾಡಲು ಸಾಧ್ಯ ಎಂದರು.ಸ್ಥಳೀಯ, ರಾಜ್ಯ, ದೇಶದ ಜ್ವಲಂತ ಸಮಸ್ಯೆಗಳಿಗೆ ಕಾಂಗ್ರೆಸ್ ಮಾತ್ರ ಪರಿಹಾರ ಕೊಡಬಲ್ಲದು. ಇಲ್ಲೂ ಜನರಿಗೂ ಬದಲವಾಣೆ ಬೇಕಿದೆ ಎಂಬುದು ಅರಿವಾಗುತ್ತಿದೆ ಎಂದರು.