ಕುಮಟಾ : ಜಿಲ್ಲೆಯ 15 ಸಾವಿರ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಿಸುವ ಕಾರ್ಯಕ್ರಮಕ್ಕೆ ಸಂಸದ ಅನಂತಕುಮಾರ್ ಹೆಗಡೆ ಬರದೆ ಗೈರು ಹಾಜರಾಗಲು ಅವರ ಆರೋಗ್ಯದಲ್ಲಿ ಏರುಪೇರು ಕಾರಣ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ.

ಕುಮಟಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಂಸದರ ಆರೋಗ್ಯ ಸರಿಯಿಲ್ಲ. ಹಾಗಾಗಿ ಅವರು ಸಂಸತ್ ಅಧಿವೇಶನಕ್ಕೂ ಹೋಗಿಲ್ಲ. ಈಗ ಅಧಿವೇಶನಕ್ಕೆ ಅಟೆಂಡ್ ಆಗಿದ್ದಾರೆ. ಬರುವ ದಿನಗಳಲ್ಲಿ ನನ್ನ ಕ್ಷೇತ್ರಕ್ಕೆ ಕರಿಸ್ತೆನೆ.

ಇನ್ನೂ ಸಂಸದ ಅನಂತಕುಮಾರ ಹೆಗಡೆ ಕುಮಟಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದರಲ್ಲಿ ಸತ್ಯಾಂಶವಿಲ್ಲ. ನಾನು ಅವರ ಜೊತೆ ಆಗಾಗ ಮಾತಾಡುವೆ. ಅವರ ಪಿಎ ಜೊತೆ ಸಹ ಮಾತಾಡಿದ್ದೇನೆ‌ . ಆ ರೀತಿ ಚಿಂತನೆ ನಡೆದಿಲ್ಲ. ಪಕ್ಷದಲ್ಲಿ ಸಹ ಈ ವಿಚಾರ ಚರ್ಚೆಯಾಗಿಲ್ಲ ಎಂದು ನನಗೆ ಸ್ಪಷ್ಟವಾಗಿ ಗೊತ್ತಿದೆ. ಹಿಂದೆ ನನಗೆ ಟಿಕೆಟ್ ಸಿಗುವಲ್ಲಿ ಸಂಸದರ ಪಾತ್ರವಿದೆ.

ಈಗ ಅವರು ಕುಮಟಾ ಕ್ಷೇತ್ರದಿಂದ ಸ್ಪರ್ಧಿಸಿದರೆ ನಾನೇ ಅವರಿಗೆ ಕ್ಷೇತ್ರ ಬಿಟ್ಟುಕೊಡುವೆ ಹಾಗೂ ಅವರ ಪಕ್ಕದಲ್ಲಿ ಮೊದಲಿಗನಾಗಿ ನಿಂತು ಕೆಲಸ ಮಾಡುವೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು‌ .