ಸುದ್ದಿಬಿಂದು ಬ್ಯೂರೋ
ಕಲಬುರಗಿ : ಕೆಇಎ ಎಫ್‌ಡಿಎ ಪರೀಕ್ಷೆಯಲ್ಲಿ(KEA FDA, Examination) ಅಕ್ರಮ ಎಸೆಗಿರುವ ಪ್ರಕರಣದಲ್ಲಿ ಕಳೆದ 12 ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡ್ತಿದ್ದ KEA FDA ಪರೀಕ್ಷೆಯ ಕಿಂಗ್‌ಪಿನ್ ಆರ್ ಡಿ ಪಾಟೀಲ್‌ನನ್ನ ಪೊಲೀಸರು ಮಹಾರಾಷ್ಟ್ರದ ಸೋಲಾಪುರ ಬಂಧಿಸಿದ್ದಾರೆ.
ಕಲಬುರಗಿ ನಗರದ ಅಶೋಕ ನಗರ ಠಾಣೆ ಪೊಲೀಸರು ಆರ್ ಡಿ ಪಾಟೀಲ್ ನನ್ನ(Arrest of RD Patil) ಬಂಧಿಸಲಾಗಿದ್ದು, ಬಂಧಿತ ಆರ್ ಡಿ ಪಾಟೀಲ್ ಗೆ ಕಲಬುರಗಿ ನಗರದ ಪೊಲೀಸ್ ಆಯುಕ್ತರ ಕಚೇರಿಗೆ ಕರೆತರಲಾಗುತ್ತಿದೆ.ಸಿಟಿ ಪೊಲೀಸ್ ಕಮಿಷನರ್ ಚೇತನ್ ಆರ್ ನೇತೃತ್ವದಲ್ಲಿ ಆರ್ ಡಿ ಪಾಟೀಲ್ ನನ್ನ ಬಂಧಿಸಲಾಗಿದೆ.
ಈ ಹಿಂದೆ ಪಿ ಎಸ್ ಐ ಪರೀಕ್ಷೆಯಲ್ಲಿಯೂ ಆಕ್ರಮದ ಆರೋಪ ಹೊತ್ತಿದ್ದ ಆರ್ ಡಿ ಪಾಟೀಲ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority) ನಡೆಸಿದ್ದ FDA ಪರೀಕ್ಷೆಯಲ್ಲಿ ಆಕ್ರಮದ ರೂವಾರಿ ಈತನೇ ಎಂದು ಹೇಳಲಾಗಿದೆ. ಪರೀಕ್ಷೆಯಲ್ಲಿ ಆಕ್ರಮ ಎಸಗಿದವರು ಆರ್ ಡಿ ಪಾಟೀಲ ಹೆಸರನ್ನು ಹೇಳಿದ್ದಾರೆ ಎನ್ನಲಾಗಿದ್ದು, ಪ್ರಕರಣ ಬಯಲಿಗೆ ಬಂದ ನಂತರ ಆರ್ ಡಿ ಪಾಟೀಲ ತಲೆ ಮರೆಸಿಕೊಂಡಿದ್ದ. ಮಹಾರಾಷ್ಟ್ರದ ಸಂಬಂದಿಕರ ಮನೆಯಲ್ಲಿ ತಂಗಿದ್ದ ಎಲ್ಲಾಗಿದೆ.