suddibindu.in
ಕುಮಟಾ : ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಕಾರು ಚಾಲಕ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ಸಮೀಪ ಖೈರಿ ಬಳಿರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
- ಅತ್ತೆಯ ಹತ್ಯೆಗೆ ಕಾರಣನಾದ ಅಳಿಯ: ಪತ್ನಿಯಿಂದ ಪತಿಯ ವಿರುದ್ಧ ದೂರು..!
- ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯಕ್ಕೆ ಅದ್ಧೂರಿ ಚಾಲನೆ
- ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆ: ಅದ್ದೂರಿಯಾಗಿ ನಡೆದ ಮೆರವಣಿಗೆ
ಬೆಂಗಳೂರು ಮೂಲದ ಐವರು ಕಾರನಲ್ಲಿ ಅಂಕೋಲಾ ಕಡೆಯಿಂದ ಕುಮಟಾ ಕಡೆ ಪ್ರಯಾಣಿಸುತ್ತಿದ್ದರು,ಈ ವೇಳೆ ಮಿರ್ಜಾನ ಖೈರೆ ಕ್ರಾಸ್ ಬಳಿ ಯು ಟರ್ನ್ ಪಡೆಯುತ್ತಿದ್ದ ಟಿಪ್ಪರ್ಗೆ ಕಾರು ಹಿಂಬದಿಯಿಂದ ಡಿಕ್ಕಿಯಾಗಿದೆ. ಇದರಿಂದಾಗಿ ಕಾರು ಚಾಲಕ ಸೇರಿ ಮೂವರಿಗೆ ಗಂಭೀರ ಗಾಯವಾಗಿದೆ. ಇನ್ನೂ ಅಪಘಾತದಲ್ಲಿ ಗಾಯಗೊಂಡವರನ್ನ ತಕ್ಷಣ 108 ವಾಹನದ ಮೂಲಕ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಲಿತ್ಸೆ ನೀಡಲಾಗಿದೆ.
ಇನ್ನೂ ಅಪಘಾತದ ರಭಸಕ್ಕೆ ಕಾರ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರು ನುಜ್ಜುಗುಜ್ಜಾಗಿದೆ. ಅಪಘಾತದ ಸುದ್ದಿ ತಿಳಿದ ಕುಮಟಾ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತವಾಗಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.