suddibindu.in
ಕಾರವಾರ : ಎಲ್ಲೆಡೆ ಸಾರ್ವಜನಿಕರ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗಿದ್ದು,ಅದ್ದೂರಿಯಾಗಿ ಆಚರಣೆ ಮಾಡಲಾಗತ್ತಾ ಇದೆ.ಈ ನಡುವೆ ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಯಾವೇಲ್ಲಾ ನಿಯಮವನ್ನ ಅನುಸರಿಸ ಬೇಕು ಅಂತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಸೂಚನೆ ನೀಡಿದ್ದಾರೆ.

ಸಾರ್ವಜನಿಕರಿಗೆ ಗಣೇಶ ಮೂರ್ತಿ ವಿಸರ್ಜನೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಸೂಚನೆಗಳು ಮೆರವಣಿಗೆಗೆ ಉಪಯೋಗಿಸುವ ವಾಹನಗಳ ದಾಖಲಾತಿ (ಡಿ ಎಲ್, ಆ‌ರ್ ಸಿ ಮತ್ತು ಇನ್ಸೂರೆನ್ಸ್ ) ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಗಣೇಶ ಮೂರ್ತಿ ಮೆರವಣಿಗೆಗೆ ಪೊಲೀಸರಿಂದ ಅನುಮತಿ ಪಡೆದ ಮಾರ್ಗದಲ್ಲಿಯೇ ಕೊಂಡೊಯ್ಯಬೇಕು, ಬದಲಿ ಮಾರ್ಗದಲ್ಲಿ ಕೊಂಡೊಯ್ಯಬಾರದು. ಗಣೇಶ ಮೆರವಣಿಗೆಯಲ್ಲಿ ಅಮಲು ಬರುವ ಪದಾರ್ಥಗಳನ್ನು ಸೇವಿಸುವಂತಿಲ್ಲ. ಗಣೇಶ ಮೆರವಣಿಗೆಯಲ್ಲಿ ಯಾವುದೇ ಅಪಾಯಕಾರಿ ಆಯುಧಗಳನ್ನು ಪ್ರದರ್ಶಿಸಿದಲ್ಲಿ ARMS ACT-1959 ಮತ್ತು ಇತರೆ ಕಾನೂನುಗಳ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು.

ಧಾರ್ಮಿಕ ಸ್ಥಳ, ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಮತ್ತು ಮೆರವಣಿಗೆ ಸಮಯದಲ್ಲಿ ರಾಸಾಯನಿಕಯುಕ್ತ ಪಟಾಕಿಗಳನ್ನು ಬಳಸುವಂತಿಲ್ಲ ಹಾಗೆಯೇ ಆಸ್ಪತ್ರೆ ಮತ್ತು ಇತರೆ ಜನ ವಸತಿ ಪ್ರದೇಶಗಳಲ್ಲಿ ಕಡ್ಡಾಯವಾಗಿ ಪಟಾಕಿಗಳನ್ನು ಸಿಡಿಸುವುದು ನಿಷೇಧಿಸಲಾಗಿದೆ. ಗಣೇಶ ಮೂರ್ತಿಯ ಮೆರವಣಿಗೆಯಲ್ಲಿ ಕೋಮುಭಾವನೆ ಹಾಡುಗಳು,ಘೋಷಣೆಗಳು ಮತ್ತು ಭಾಷಣಗಳನ್ನು ಮಾಡುವಂತಿಲ್ಲ. ಕೆರಳಿಸುವಂತಹ ಗಣೇಶಮೂರ್ತಿ ಮೆರವಣಿಗೆಯನ್ನು ನಿಗದಿತ ಅವಧಿಯ ಒಳಗೆ ಪ್ರಾರಂಭಿಸಿ ನಿಗದಿತ ಅವಧಿಯ ಒಳಗೆ ಮುಕ್ತಾಯ ಮಾಡಬೇಕು.ಗಣೇಶ ಮೂರ್ತಿಯ ವಿಸರ್ಜನೆ ಆದ ಕೂಡಲೇ ಪೆಂಡಾಲ್, ಬಂಟಿಂಗ್ಸ್, ಬ್ಯಾನರ್ ಮತ್ತು ಇತರೆ ಪರಿಕರಗಳನ್ನು ಕೊಡಲೇ ತೆರವುಗೊಳಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ