suddibindu.in
ಕುಮಟಾ :ರಾಜ್ಯಕ್ಕೆ ಬೆಳಕು ನೀಡುವ ಉತ್ತರಕನ್ನಡ ಜಿಲ್ಲೆಯಲ್ಲಿ ಸದಾ ಕಾಲ ವಿದ್ಯುತ್ ಕಣ್ಣ ಮುಚ್ಚಾಲೆ ಆಟ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದಾಗಿ ನಗರ, ಪಟ್ಟಣ ಸೇರಿದಂತೆ ಗ್ರಾಮೀಣ‌ ಪ್ರದೇಶದ ಜನ ನಿತ್ಯವೂ ವಿದ್ಯುತ್ ಸಮಸ್ಯೆಯಿಂದಾಗಿ ರೋಸಿ ಹೋಗಿದ್ದಾರೆ.

ಕುಮಟಾ ತಾಲೂಕಿನಾದ್ಯಂತ ಸಣ್ಣದೊಂದು ಗಾಳಿ ಬಂದರೆ ಸಾಕು ತಕ್ಷಣ ವಿದ್ಯುತ್ ಕಣ್ಣುಮುಚ್ಚಿಕೊಳ್ಳುತ್ತವೆ. ಈ ಬಗ್ಗೆ ಸಂಬಂಧಿಸಿದವರನ್ನ ಕೇಳಿದ್ದರೆ ಸಿದ್ದವಾದ ಅವರ ಉತ್ತರ ಏನಂದರೆ ಮೇನ್‌ಲೈನ್ ಸಮಸ್ಯೆ ಎಂದು ಪೋನ್ ಕಟ್ ಮಾಡಿ ಬಿಡುತ್ತಿದ್ದಾರೆ. ಪ್ರತಿ ಬುಧವಾರ ವಿದ್ಯುತ್ ಲೈನ್ ದುರಸ್ತಿಗೆ ಅಂತಾ ದಿನವಿಡಿ ಪವರ್ ಕಟ್ ಮಾಡಿ ದುರಸ್ತಿ ಮಾಡುತ್ತಾರೆ. ಆದರೆ ಕರೆಂಟ್ ಮಾತ್ರ ಇರೋದಿಲ್ಲ.ಪವರ್ ಕಟ್ ಆಗಿರುವ ಸಮಯದಲ್ಲಿ ಕಚೇರಿಗೆ ಪೋನ್ ಮಾಡಿದ್ದರೆ ಕಥೆ ಗೋವಿಂದ.. ಕರೆಂಟ್ ಬರೋತನಕ ಅವರ ದೂರವಾಣಿ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎನ್ನುವ ಸಂದೇಶದ ಧ್ವನಿ ಸುರುಳಿ ಕೇಳಿ ಬರುವುದು ಬಿಟ್ಟರೆ ಬೇರೆ ಏನು ಇಲ್ಲ.

ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ ವರ್ಷದ 365 ದಿನವೂ ಇದೆ ಸಮಸ್ಯೆ‌.ಇನ್ನೂ ಹಬ್ಬ ಹರಿದಿನ ಬಂದರೆ ವಿದ್ಯುತ್ ಸಮಸ್ಯೆ ಹೇಳೋದಲ್ಲ. ಒಮ್ಮೆ ವಿದ್ಯುತ್‌ ಹೋದರೆ ಕಡಿಮೆ ಅಂದರು ಸುಮಾರು ಎರಡು ಗಂಟೆಗಳ‌ ಕಾಲ ವಿದ್ಯುತ್ ಬಂದ ಉದಾರಣೆಗಳು ಸಿಗುವುದು ವಿರಳ..ಇನ್ನೂ ತೀರಾ ಗುಡ್ಡಗಾಡು ಪ್ರದೇಶದಲ್ಲಂತೂ ವಾರದಲ್ಲಿ ಎರಡು ಮೂರು ದಿನ ಕತ್ತಲೆಯಲ್ಲೆಯಲ್ಲೆ ಕಾಲ ಕಳೆಯ ಬೇಕಾದ ಪರಿಸ್ಥಿತಿ ಈ ಹಿಂದಿನಿಂದಲ್ಲೂ ಇದೆ..ಇದಕ್ಕೆಲ್ಲಾ ಪ್ರಮುಖ ಕಾರಣ ಹೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ‌ ಕೊರತೆ ಎನ್ನುವ ಆರೋಪ ಸಹ ಇದೆ. ಇಲಾಖಾವಾರು ಸಭೆಗಳಲ್ಲಿ ಈ ಬಗ್ಗೆ ಜನಪ್ರತಿನಿಧಿಗಳು ಪ್ರಶ್ನೆ ಮಾಡಿದರೆ ನಮ್ಮಲ್ಲಿ ಎಲ್ಲವೂ ಸರಿಯಾಗಿದೆ ಎನ್ನುವ ಹಾರಿಕೆ ಉತ್ತರ ಕೊಟ್ಟು ಜಾರಿಕೊಳ್ಳುತ್ತಾರೆ. ಅದೇನೆ ಇರಲಿ ದೀಪದ ಬುಡದಲ್ಲೇ ಕತ್ತಲು ಎನ್ನುವಂತಾಗಿದೆ ಉತ್ತರಕನ್ನಡ ಜಿಲ್ಲೆಯ ಜನರ ಕಥೆ.

ಇದನ್ನೂ ಓದಿ