:ಅಂಕೋಲಾ: ಸತ್ಯಾಗ್ರಹಿಗಳ ತವರೂರಾದ ಅಂಕೋಲಾ ಕರ್ನಾಟಕದ ಬಾರ್ಡೊಲಿಯೆಂದೇ ಪ್ರಸಿದ್ಧ. ಇಲ್ಲಿಯ ಇಷಾಡ್‌ ಮಾವಿನ ಹಣ್ಣು, ತಾಜಾ ಮೀನು, ತರಕಾರಿ ಹಾಗೇ ಬಂಡಿಹಬ್ಬ ಕೂಡಾ ಅತ್ಯಂತ ವಿಶಿಷ್ಠ ಹಾಗೂ ಜನಪ್ರಿಯ. ಇಂಥ ದೈವ ಸದೃಶ್ಯವಾದಂಥ ಅಂಕೋಲಾ ಇಂದುದೇವರ ಆಟ’ ಎಂದೇ ಕು’ಖ್ಯಾತಿಯಾದ ಮಟ್ಕಾ ದಂಧೆಗೆ ಖ್ಯಾತವಾಗುತ್ತಿರುವುದು ಅಂಕೋಲಿಗರ ನೋವಿಗೆ ಕಾರಣವಾಗಿದೆ.

ಇನ್ನಷ್ಟು ಸುದ್ದಿಗಾಗಿ:-ಕಾರ್ಮಿಕರು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ

ಬಡವರು, ಕೂಲಿಕಾರರ ದುಡಿತ ಈಮಟ್ಕಾ’ ಪಾಲಾಗುತ್ತಿದೆ. ಊರಿನ ಹೃದಯ ಭಾಗದಲ್ಲೇ ಕುಳಿತಿರುವ ಸಾಕ್ಷಾತ ಗೋವಿಂದ' ನೇ ತನ್ನ ಇಡೀ ಕುಟುಂಬವನ್ನೇ ಈ ದಂಧೆಗೆ ತೊಡಗಿಸಿದ್ದಾನೆ. ಕುಬೇರನ ಸಂಪತ್ತನ್ನು ಕಾಯುವ 'ನಾಗರಾಜ' ಈ ದಂಧೆಯನ್ನು ಕಾಯುತ್ತಿದ್ದಾನೆ. ಒಟ್ಟಾರೆ ಇವರು ಈ ಮಟ್ಕಾ ದಂಧೆಯಲ್ಲಿ ಇವರ ಕುಟುಂಬ ಅತ್ಯಂತ "ಪ್ರವೀಣ''ತೆಯನ್ನು ಹೊಂದಿದ್ದಾರೆ ಎಂಬುದು ಅಂಕೋಲಿಗರ ಮಾತು. ಈ ಮಟ್ಕಾ ಫ್ಯಾಮಿಲಿ ಬ್ಯುಸಿನೆಸ್‌ ನಿಂದಲೇ ಇವರು ಕೋಟ್ಯಾಂತರ ರೂಪಾಯಿ ಗಳಿಸಿದ್ದು, ಅಂಕೋಲಾ, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಗಳಿಸಿದ್ದಾರೆ ಎಂದರೇ ಈಮಟ್ಕಾ’ ಆಟದ ಖದರ್‍ರು ಎಂಥದ್ದು ಎಂದು ಅಂಕೋಲಿ ಜನ ಹುಬ್ಬೇರಿಸುತ್ತಿದ್ದಾರೆ.

ಎಲ್ಲರನ್ನೂ ತನ್ನ ಪ್ರವೀಣತೆಯಿಂದ ಆಡಿಸಿ ತಮ್ಮ ಬುಟ್ಟಿಗೆ ಹಾಕಿಕೊಂಡಿರುವ ಇವರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಗೋವಿಂದ'ನ ಸಂಪತ್ತನ್ನು ನೋಡಿ ಯಾವುದೇಬಂಡವಾಳ’ ಇಲ್ಲದೆ ಲಕ್ಷಾಂತರ ಗಳಿಸುವ ಈ ಬ್ಯುಸಿನೆಸ್‌ ನಾವೂ ಮಾಡಿ, ನಾಲ್ಕು ಕಾಸು ಗಳಿಸುವಾ ಎಂದು ಕೆಲ ಕಿಲಾಡಿ ಅಂಕೋಲಿಗರು ವಿಚಾರ ಮಾಡ್ತಿರೋದು ಸುಳ್ಳಲ್ಲ….!

ಇವರಲ್ಲಿ ಕಣ್ಣಿಗೆ ‌ಕಾಣುವ ಒಂದೇ ಒಂದು ಉದ್ಯೋಗ ಇಲ್ಲದೆ ಇದ್ದರೂ ಕೂಡ ಈ ರೀತಿಯಾಗಿ ಕೋಟಿ ಕೋಟಿ ಹಣ ಎಲ್ಲಿದ್ದ‌ ಬರತ್ತಿದೆ ಎನ್ನುವ ಬಗ್ಗೆ ಸಂಬಂಧಿಸಿದ ಇಲಾಖೆಗಳು ಸಮಗ್ರ ತನಿಖೆ‌ ನಡೆಸಿದ್ದೆ ಹೌದಾದರೆ ಇವರ ಎಲ್ಲಾ ಆಸ್ತಿ ಮಟ್ಕಾ ದಂಧೆಯಿಂದಲೇ ಬಂದಿರುವುದು ಎನ್ನುವ ಸತ್ಯ ಹೊರ ಬರಲಿದೆ. ಮಟ್ಕಾದಿಂದಾಗಿ ಕೋಟಿ ಹಣ ಗಳಿಸಿರುವ ಇವರ ಅಕ್ರಮ ದಂಧೆಗೆ ಕಡಿವಾಣ ಹಾಕುವ ಜೊತೆಗೆ ಸಂಬಧಿಸಿದ ಇಲಾಖೆಯ ಅಧಿಕಾರಿಗಳು ತನಿಖೆ‌ ಮಾಡಬೇಕಿದೆ‌. ಅಂಕೋಲೆಯಲ್ಲಿ ಇನ್ನೂ ಅನೇಕ ಬಾಗಲ ಬಂಟರ ಆಟ ಕೂಡ ಜೋರಾಗಿದೆ‌. ಇವರ ಜೊತೆಗೆ ಅಂಕೋಲೆಯ ಆ ಬಾಗಿಲ ಬಂಟನ ಆಟಕ್ಕೂ ಬ್ರೇಕ್ ಹಾಬೇಕಿದೆ.

.