ಸುದ್ದಿಬಿಂದು ಬ್ಯೂರೋ
ಕುಮಟಾ: ಹಿಂದುಸ್ತಾನದಲ್ಲಿ ಹುಟ್ಟಿ ಹಿಂದುಗಳ ವಿರುದ್ಧ ಮಾತನಾಡೋದು ಹೇಯ ಕೃತ್ಯ, ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನೂ ರಾಮಭಕ್ತ, ನನ್ನನ್ನೂ ಬಂಧಿಸಿ ಪ್ರತಿಭಟನೆ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಾಸಕ ದಿನಕರ ಶೆಟ್ಟಿ, ಕಾಂಗ್ರೆಸ್ ತನ್ನ ಶಕ್ತಿಯನ್ನ ಲೋಕಸಭಾ ಚುನಾವಣೆಯಲ್ಲಿ ತೋರಿಸಲಿ,ಗೋಧ್ರಾದಲ್ಲಿ ಗಲಾಟೆ ಆಗಿದ್ದು ಏನು ಅನ್ನೋದೇ ಅವರಿಗೆ ಗೊತ್ತಿಲ್ಲ. ಕರಸೇವಕರ ರೈಲಿನಲ್ಲಿ ತಡೆದು, ಮುಸ್ಲಿಂರೆ ಬೆಂಕಿ ಹಚ್ಚಿದ್ದು, ನಮ್ಮಿಂದ ಯಾವುದೇ ಗಲಾಟೆಯಾಗಿಲ್ಲ, ಇದನ್ನ ಮಾಡಿದ್ದು ಮುಸ್ಲಿಂರೆ, ಈಗ ನಮ್ಮ ತಲೆ ಮೇಲೆ ಹಾಕುವ ಪ್ರಯತ್ನ ನಡೆಯುತ್ತಿದೆ.
ಇದನ್ನು ಓದಿ :- ಮಟ್ಕಾ ದಂಧೆಯ ಆಟವನ್ನ ‘ಗೋವಿಂದ’ನೇ ಕಾಪಾಡಬೇಕು
ಗ್ಯಾರೆಂಟಿ ಕೊಡುವ ಮೂಲಕ ಕಾಂಗ್ರೆಸ್‌ನವರು ಸೋತು ಸುಣ್ಣವಾಗಿದ್ದಾರೆ.ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಹಣ ಹಾಕಲು ಸರ್ವರ್ ಸಮಸ್ಯೆಯಾಗಿಲ್ಲ.ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಿಗೆ ಮಾತ್ರ ಯಾಕೆ ಸರ್ವರ್ ಸಮಸ್ಯೆ ಆಗದತ್ತಾ ಇದೆ ಎಂದು ಪ್ರಶ್ನಿಸಿದ್ದಾರೆ.ಯಾವ ಕರಸೇವಕರನ್ನೂ ಟಾರ್ಗೆಟ್ ಮಾಡುವುದು ಸಾಧ್ಯವಿಲ್ಲ.ರಾಮಮಂದಿರ ಉದ್ಘಾಟನೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
ಪೊಲೀಸರ ವಿರುದ್ಧ ದಿನಕರ ಶೆಟ್ಟಿ ಗರಂ
ರಾಜ್ಯದಲ್ಲಿ ಪೊಲೀಸರು ಯಾವಾಗಲೂ ಬಿಜೆಪಿಯ ವಿರೋಧಿಗಳಾಗಿದ್ದಾರೆ. ಮೊದಲಿನಿಂದಲೂ ಪೊಲೀಸರು ಬಿಜೆಪಿಯನ್ನ ವಿರೋಧಿಸುತ್ತಲೆ ಬಂದಿದ್ದಾರೆ. ಬಿಜೆಪಿಯವರನ್ನ ಕಂಡರೆ ಪೊಲೀಸರಿಗೆ ಆಗದ ಪರಿಸ್ಥಿತಿ ಇತ್ತು, ಏನೂ ಪ್ರಕರಣ ಇಲ್ಲದವರ ಮೇಲೆ ಕೇಸ್ ದಾಖಲಿಸಿದ ಘಟನೆ ಸಹ ನಡೆದಿದೆ.