ಸುದ್ದಿಬಿಂದು ಬ್ಯೂರೋ
ಶಿವಮೊಗ್ಗ : ಜಿಲ್ಲೆಯ ರಾಗಿಗುಡ್ಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ ಜಿಲ್ಲೆಯಲ್ಲಿ ಯಾವುದೇ ಗಲಾಟೆ ಇಲ್ಲ. ಎಲ್ಲವೂ ಶಾಂತಿಯುತವಾಗಿದೆ ಎಂದು ಎಸ್ಪಿ ಸ್ಪಷ್ಟನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಕಲ್ಲುತೂರಾಟ ಪ್ರಕರಣ ಸದ್ಯ ಶಾಂತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೆ 24 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 60ಮಂದಿಯನ್ನ ಬಂಧಿಸಲಾಗಿದೆ. ಘಟನೆಯಲ್ಲಿ ಒಂದು ಕಾರು, ಎರಡು ದ್ವಿಚಕ್ರ ವಾಹನಗಳು, ಒಂದು ಆಟೋ ಘಟನೆಯಿಂದಾಗಿ ಹಾನಿಯಾಗಿದೆ.
ರಾಗಿಗುಡ್ಡ ಸೇರಿ ಶಿವಮೊಗ್ಗ ಜಿಲ್ಲಾದ್ಯಂತ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಯಾರೂ ಕೂಡ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಬಾರದು. ಸಾರ್ವಜನಿಕರು ಸುಳ್ಳು ಸುದ್ಧಿಗಳನ್ನು ನಂಬಾರದು. ಪ್ರಕಣದಲ್ಲಿ ಇನ್ನೂ ಹಲವರಿದ್ದಾರೆ ಅವರನ್ನು ಸಹ ಬಂಧಿಸಲಾವುವುದು. ಪ್ರಕರಣದಲ್ಲಿ ಯಾರಿದ್ದಾರೆ ಎಲ್ಲರನ್ನೂ ಸಹ ಬಂಧಿಸಲಾಗುವುದು.
ಹೊರಗಿನಿಂದ ಬಂದವರ ಬಗ್ಗೆಯೂ ಸಹ ತನಿಖೆ ಮಾಡುತ್ತಿದ್ದೆವೆ. ಎಲ್ಲಾ ಆಯಾಮಗಳಲ್ಲಿ ಸಾಕ್ಷಿಗಳು ನಮಗೆ ಸಿಕ್ಕಿದೆ. ಸಿಸಿಟಿವಿಯಲ್ಲಿ ಘಟನೆಗಳು ಸೆರೆಯಾಗಿದೆ.ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೆವೆ. ಯಾರೂ ಸಹ ಈ ಘಟನೆಯ ಬಗ್ಗೆ ಅನುಮಾನ ಪಡುವುದು ಬೇಡ ಎಂದಿದ್ದಾರೆ.