ಸುದ್ದಿಬಿಂದು ಬ್ಯೂರೋ
ಶಿವಮೊಗ್ಗ : ಮಡದಿಯ ಸಾವಿನ ದುಃಖದಿಂದ ನೊಂದ ಪೊಲೀಸ್‌ರೋರ್ವರು, ಪತ್ನಿಯ ಸಾವನ್ನ ಮನಸ್ಸಿಗೆ ಹಚ್ಚಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಜೊತೆಗಾರತಿ ಮಡದಿ ಜೀವನದುದ್ದಕ್ಕೂ ಇರುವಳೆಂಬ ನಂಬಿಕೆಯಲ್ಲಿ ಬದುಕಿದ್ದ, ಸಂಚಾರಿ ಪೊಲೀಸ್ ಠಾಣೆಯ ಮುಖ್ಯಪೇದೆ ಜಯಪ್ಪ ಉಪ್ಪಾರ್ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಇವರ ಪತ್ನಿ ಆರೋಗ್ಯ ಸರಿಯಿಲ್ಲದ ಪ್ರಯುಕ್ತ ಮರಣ ಹೊಂದಿದ್ದರು.

ಮಡದಿಯ ಸಾವಿನ ದುಃಖದಿಂದ ನೊಂದು ಜಯಪ್ಪ ಉಪ್ಪಾರ್ ಮರಣ ಹೊಂದಿದ್ದಾರೆಂದು ತಿಳಿದು ಬಂದಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.