suddibindu.in
ಕಾರವಾರ : ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಂಜಲಿ ನಿಂಬಾಳ್ಕರ್ ಅವರಿಗೆ ನೀಡಬಾರದೆಂದು ಎನ್ ಎಸ್ ಯುಐ ಸದಸ್ಯರು ಹಾಗೂ ಕಾಂಗ್ರೆಸ್ ಟಿಕೆಟ್ ‌ಆಕಾಂಕ್ಷಿಯಾಗಿರುವ ನ್ಯಾಯವಾದಿ ಜಿ ಟಿ ನಾಯ್ಕ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಕಾರವಾರದ ಜಿಲ್ಲಾಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು. ಅಂಜಲಿ ನಿಂಬಾಳ್ಕರ್ ಅವರಿಗೆ ಜಿಲ್ಲೆಯಲ್ಲಿ ಹೆಚ್ಚಿನ ಬೆಂಬಲ ಇಲ್ಲ, ಅವರಿಗೆ ಟಿಕೆಟ್ ನೀಡಿದರೆ ಗೆಲ್ಲುವುದು ಕಷ್ಟವಾಗಲಿದೆ.ಬಿಜೆಪಿ ಭದ್ರಕೋಟೆಯಾಗಿರುವ ಉತ್ತರಕನ್ನಡದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬೇಕು ಅಂದ್ರೆ ಜಿಲ್ಲೆಯವರಿಗೇ ಟಿಕೆಟ್ ಕೊಡಬೇಕು.ಹೀಗಾಗಿ ಹೆಚ್ಚಿನ ಮತದಾರರನ್ನ ಹೊಂದಿರುವ ನಾಮಧಾರಿ ಸಮುದಾಯದ ಜಿ.ಟಿ.ನಾಯ್ಕ ಅವರಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:-

ಹೈಕಮಾಂಡ್‌ ಮೇಲೆ ಒತ್ತಡ ಹೇರಿ ಟಿಕೆಟ್ ತರುವ ಮೊದಲು ಜಿಲ್ಲೆಯ ಜನರನ್ನ ಅರ್ಥ ಮಾಡಿಕೊಂಡು, ಜಿಲ್ಲೆಯಲ್ಲಿ ಕೆಲಸ ಮಾಡಲಿ.ಅಷ್ಟೆ ಅಲ್ಲದೆ ಅಂಜಲಿ ಅವರಿಗೇ ಟಿಕೆಟ್ ಕೊಡಬೇಕಾದ ಅನಿವಾರ್ಯತೆಗಳೇನು ಇಲ್ಲ.ಜಿ.ಟಿ ನಾಯ್ಕ ಅವರಿಗೆ ಟಿಕೆಟ್ ಕೊಟ್ಟಲ್ಲಿ ಅವರನ್ನ ಗೆಲ್ಲಿಸಿಕೊಂಡು ಬರುತ್ತೇವೆ. ಜಿ.ಟಿ.ನಾಯ್ಕ ಅವರು ಕಳೆದೆರಡು ವರ್ಷಗಳಿಂದ ಕ್ರೀಡೆ, ಧಾರ್ಮಿಕ ಕಾರ್ಯಗಳಿಗೆ ಸಹಾಯ ಸಹಕಾರ ಮಾಡುತ್ತಿದ್ದಾರೆ. ಅಂಜಲಿ ನಿಂಬಾಳ್ಕರ್ ಅವರಿಗೆ ಬಹುಶಃ ಉತ್ತರಕನ್ನಡದಲ್ಲಿ ಎಷ್ಟು ಮನೆ ಇದೆ ಎನ್ನುವುದೂ ಗೊತ್ತಿದೆಯೋ ಇಲ್ಲವೋ, ಕೇವಲ ಅವರಿಗೆ ಕಿತ್ತೂರು, ಖಾನಾಪುರ ಭಾಗದಲ್ಲಿ ಬೆಂಬಲ ಇದೆ ಎನ್ನುತ್ತಾರೆ. ಅವರಿಗೆ ಅಲ್ಲಿ ಬೆಂಬಲ ಇದ್ದರೆ ವಿಧಾನಸಭಾ ಚುನಾವಣೆಯಲ್ಲಿ ಯಾಕೆ 50 ಸಾವಿರ ಮತಗಳ ಅಂತರದಿಂದ ಸೋಲುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

ಅವರು ಬೆಳಗಾವಿ ಭಾಗದಲ್ಲಿ ಗುರುತಿಸಿಕೊಂಡಿದ್ದಾರೆ, ಉತ್ತರಕನ್ನಡದ ಯಾವೊಬ್ಬ ಮುಖಂಡರು, ಕಾರ್ಯಕರ್ತರನ್ನ ಅವರು ಸಂಪರ್ಕಿಸಿಲ್ಲ.ಗಾಡ್‌ಫಾದರ್ ಬಳಸಿಕೊಂಡು ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ. ನಮ್ಮ ಜಿಲ್ಲೆಯವರು ಬೇರೆ ಜಿಲ್ಲೆಗೆ ಹೋದರೆ ಯಾರಾದರೂ ಬೆಂಬಲಿಸುತ್ತಾರಾ? ಹಾಗಾದರೆ ಅವರು ಇಲ್ಲಿಗೆ ಬಂದು ನಿಲ್ಲುವುದು ಎಷ್ಟು ಸರಿ, ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪ್ರಯತ್ನಪಟ್ಟರೂ ಬಿಜೆಪಿಯನ್ನ ಸೋಲಿಸಲು ಸಾಧ್ಯವಾಗಿಲ್ಲ.

ಈ ಬಾರಿ ಹಾಲಿ ಸಂಸದರಿಗೆ ವಿರೋಧ ಅಲೆ ಜಿಲ್ಲೆಯಲ್ಲಿದೆ.ಹಾಗಾಗಿ ಕಾಂಗ್ರೆಸ್ ಗೆಲ್ಲಲು ಪೂರಕ ವಾತಾವರಣ ಇರುವಾಗ ಅಭ್ಯರ್ಥಿ ಗೊಂದಲದಿಂದ ಸೋಲು ಕಾಣುವಂತಾಗಬಾರದು. ಉತ್ತರಕನ್ನಡವನ್ನ ಗೆಲ್ಲಲೇಬೇಕಾದ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಒಂದೊಮ್ಮೆ ಅಂಜಲಿ ಅವರಿಗೆ ಟಿಕೆಟ್ ನೀಡಿದ್ದು ಹೌದಾದರೆ ಸೋಲು ಖಚಿತ ಎಂದಿದ್ದಾರೆ.