ಸುದ್ದಿಬಿಂದು ಬ್ಯೂರೋ
ಮೈಸೂರು
: ಬಿಯರ್ ನಲ್ಲಿ(Beer)ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ. ಹೀಗಾಗಿ, 25 ಕೋಟಿ ರೂಪಾಯಿ ಮೌಲ್ಯದ 78,678 ಬಾಕ್ಸ್ ಮದ್ಯವನ್ನು ವಶಪಡಿಸಿಕೊಂಡಿರುವ ಮೈಸೂರು ಅಬಕಾರಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂಜನಗೂಡಿನಲ್ಲಿರುವ ಕಂಪನಿ ತಯಾರಿಸಿದ್ದ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಕಂಡುಬಂದಿದೆ. ಕಂಪನಿಯ ಸ್ಟ್ರಾಂಗ್ ಹಾಗೂ ಅಲ್ವಾ ಲ್ಯಾಗರ್ ಬ್ಯಾಂಡ್‌ಗಳಲ್ಲಿ ಈ ಅಂಶವಿರುವುದು ಬೆಳಕಿಗೆ ಬಂದಿದೆ.

ಮೈಸೂರಿನ ನಂಜನಗೂಡಿನ ಘಟಕದಲ್ಲಿ ತಯಾರಿಸಲಾಗಿದ್ದ ಯುನೈಟೆಡ್‌ ಬ್ರಿವರೀಸ್‌ ಕಂಪನಿಯ ಕಿಂಗ್‌ ಫಿಶರ್‌ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದ್ದು, 25 ಕೋಟಿ ರೂ. ಮೌಲ್ಯದ 78,678 ಬಾಕ್ಸ್‌ ಬಿಯರ್‌ ಅನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಗುಣಮಟ್ಟದ ಬಿಯರ್‌ ತಯಾರಿಸದ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಈ ಬಿಯರ್‌ನಲ್ಲಿ ಸೆಡಿಮೆಂಟ್‌ ಪತ್ತೆಯಾಗಿತ್ತು. ಈ ಮಾಹಿತಿ ತಿಳಿದ ಕೂಡಲೇ ಬಿಯರ್ ಸ್ಯಾಂಪಲ್ ಅನ್ನು ಕೆಮಿಕಲ್ ಲ್ಯಾಬ್ ಗೆ ಕಳುಹಿಸಲಾಗಿದ್ದು, ಈ ಕುರಿತು 2-08-2023ರಂದು ಕೆಮಿಕಲ್ ವರದಿ ಬಂದಿದ್ದು, ವರದಿಯಲ್ಲಿ ಅನ್ ಫಿಟ್ ಫಾರ್ ಹ್ಯುಮನ್ ಕನ್ಸಂಪ್ಷನ್ ಎಂದು ತಿಳಿಸಲಾಗಿದೆ.

ಕಿಂಗ್ ಫಿಷರ್ ಸ್ಟ್ರಾಂಗ್ (Kingfisher Strong )ಹಾಗೂ ಕಿಂಗ್ ಫಿಷರ್ ಅಲ್ಟ್ರಾ ಲ್ಯಾಗರ್ ಬಿಯರ್ ನಲ್ಲಿ(King Fisher Strong Beer,) ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಈ ಬಿಯರ್‌ ಕುಡಿಯಲು ಯೋಗ್ಯವಲ್ಲದ ಕಾರಣ ಮಾರುಕಟ್ಟೆಯಲ್ಲಿರುವ ಈ ಬ್ಯಾಚ್‌ನ ಬಿಯರ್‌ಗೂ ತಡೆ ನೀಡಲಾಗಿದೆ.