ಸುದ್ದಿಬಿಂದು ಬ್ಯೂರೋ
ಹುಬ್ಬಳ್ಳಿ
: ಸ್ವಾತಂತ್ರ್ಯ ದಿನಾಚರಣೆಯ ಕರ್ತವ್ಯ ನಿರ್ವಹಿಸಿ ತಮ್ಮ ಪೊಲೀಸ್ ವಸತಿ ಗೃಹದಲ್ಲಿ ಮಲಗಿದ್ದಾಗಲೇ ತೀವ್ರ ಹೃದಯಾಘಾತದಿಂ (ASI Heart Attack) ಎಎಸ್ಐವೊಬ್ಬರು ನಿಧನರಾದ ಘಟನೆ ಹುಬ್ಬಳ್ಳಿ ಪೊಲೀಸ್ ಕ್ವಾಟರ್ಸ್‌ನಲ್ಲಿ ಸಂಭವಿಸಿದೆ.

1994ನೇ ಬ್ಯಾಚಿನ ಚಂದ್ರು ಚೆಲವಾದಿ ಎಂಬುವವರೇ ನಿಧನರಾಗಿದ್ದು, ಗೋಕುಲ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಚಂದ್ರು ಅವರು ಮೂಲತಃ ಮುಳಗುಂದದವರಾಗಿದ್ದು, ಎರಡು ಮಕ್ಕಳನ್ನ ಹೊಂದಿದ್ದರು. ಎಎಸ್ಐ ಅವರ ನಿಧನದಿಂದ ಇಲಾಖೆಯಲ್ಲಿನ ಅವರ ಬ್ಯಾಚ್‌ಮೆಂಟ್‌ಗಳು ಕಣ್ಣೀರಿಡುವಂತಾಗಿದೆ.