ಸುದ್ದಿಬಿಂದು ಬ್ಯೂರೋ
ಬೆಂಗಳೂರು
: ಚುನಾವಣಾ ಸಂದರ್ಭದಲ್ಲಿ ರಾಜಕೀಯ ನಾಯಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವುದು ಸಾಮಾನ್ಯ.ಆದರೆ ಈಗ ರಾಜ್ಯದಲ್ಲಿ ಯಾವುದೇ ಚುನಾವಣೆ ಇಲ್ಲದೆ‌ ಇದ್ದರೂ ಬಿಜೆಪಿಗೆ ಆಪರೇಷನ್ ‌ಭೀತಿ ಎದುರಾಗಿದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ‌ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಗುಸುಗುಸು ಕೇಳಿ ಬರುತ್ತಿದೆ‌‌.

ಈ ಹಿಂದೆ ರಾಜ್ಯದಲ್ಲಿ ಸಮಿಶ್ರ ಸರಕಾರದ ಇದ್ದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಸುಮಾರು 17ಮಂದಿ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಕೆಲವರು ಗೆದ್ದು ಬಿಜೆಪಿ ಸಂಪೂರ್ಣ ಬೆಂಬಲ ನೀಡುವುದರೊಂದಿಗೆ ಪೂರ್ಣಪ್ರಮಾಣದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರಲು ಸಹಕಾರಿ ಆಗುವ ಮೂಲಕ ಸಚಿವರಾದ್ದರು. ಅವರ ಪಟ್ಟಿಯಲ್ಲಿ ಯಲ್ಲಾಪುರದ ಶಾಸಕರ ಶಿವರಾಮ ಹೆಬ್ಬಾರ್ ಸಹ ಒಬ್ಬರು.

ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ 135 ಶಾಸಕರು ಆಯ್ಕೆಗೊಂಡು ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಬೇರೆ ಯಾವುದೇ ಪಕ್ಷದ ಶಾಸಕರ ಬೆಂಬಲವಿಲ್ಲದೆ ಅಧಿಕಾರಕ್ಕೆ ಬಂದಿದೆ. ಹೀಗಿರುವಾಗ ಮತ್ತೆ ಬಿಜೆಪಿ, ಶಾಸಕರನ್ನ ಅದರಲ್ಲೂ ಕಾಂಗ್ರೆಸ್ ತೊರೆದು ಈ ಹಿಂದೆ ಬಿಜೆಪಿಗೆ ಹೋಗಿರುವ ಶಾಸರಿಗೆ ಕಾಂಗ್ರೆಸ್ ಗಾಳ ಹಾಕಿದ್ದು, ಸದ್ಯ 5-6ಬಿಜೆಪಿ ಶಾಸಕರುಗಳು ಕಾಂಗ್ರೆಸ್ ಗೆ ಬರಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.

ಮೊದಲ ಹಂತದಲ್ಲಿ ಶಿವರಾಮ ಹೆಬ್ಬಾರ್, ಭೈರತಿ ಬಸವರಾಜ್,ಎಸ್ ಟಿ ಸೋಮಶೇಖರ ಸೇರಿ ಇನ್ನೂ ಕೆಲ‌ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಜೊತೆ ಮಾತುಕತೆ ನಡೆಸಿದ್ದು, ಮಾತುಕತೆ ಯಶಸ್ವಿಯಾಗಿದೆ ಎನ್ನಲಾಗಿದೆ. ಇವರೆಲ್ಲರೂ ಸಹ ಈ ಭಾರಿಯ ವಿಧಾನಸಭಾ ಚುನಾವಣಾ ಸಮಯದಲ್ಲೆ ಕಾಂಗ್ರೆಸ್ ಗೆ ಸೇರಲಿದ್ದಾರೆ ಎನ್ನುವ ಚರ್ಚೆಗಳು ಜೋರಾಗಿ ಕೇಳಿಬಂದಿತ್ತು.ಆದರೆ ಕಾರಣಾಂತರಗಳಿಂದ ಅದು ಕೈಗೂಡಿರಲಿಲ್ಲ.

ಇದೀಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಕಾಂಗ್ರೆಸ್ ‌ಸಹ ಒಂದಿಷ್ಟು ಬಿಜೆಪಿ ಹಾಗೂ ಜೆಡಿಎಸ್ ಶಾಸಕರುಗಳನ್ನ ಕಾಂಗ್ರೆಸ್ ಗೆ ಕರೆತರುವ ಮೂಲಕ ರಾಜ್ಯದಲ್ಲಿ ತಮ್ಮ ಪಕ್ಷ ಬಲಿಷ್ಠವಾಗಿದೆ. ಎಂದು ರಾಜ್ಯದ ಜನರ ಎದುರು ಬಿಂಬಿಸಿ 20ಕ್ಕೂ ಹೆಚ್ಚು ಸಂಸದರನ್ನ‌ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಈ ಹೊಸ ಪ್ರಯೋಗಕ್ಕೆ ಕೈಹಾಕಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಕಾಂಗ್ರೆಸ್ ಅಂದುಕೊಂಡಂತೆ ಆದಲ್ಲಿ. ರಾಜ್ಯದಲ್ಲಿ‌ ಬಿಜೆಪಿ ಮತಷ್ಟು ಸಂಕಷ್ಟ ಎದುರಿಸಬೇಕಾ ಪರಿಸ್ಥಿತಿ ಎದುರಾಗಬಹದು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಅಪರೇಷನ್‌ ಕಾಂಗ್ರೆಸ್ ‌ನಿಂದ ಬಿಜೆಪಿಯಲ್ಲಿ ನಡುಕ ಉಂಟಾಗಿದ್ದು, ಯಾರೇಲ್ಲಾ ಕಾಂಗ್ರೆಸ್ ಗೆ ಹೋಗತ್ತಾರೆ ಎನ್ನುವ ಬಗ್ಗೆ ಬಿಜೆಪಿ ಪಾಳಯದಲ್ಲಿ ಚರ್ಚೆಗಳು ಜೋರಾಗಿದೆ.