ಕಾರವಾರ : ತಾಲೂಕಿನ ಸದಾಶಿವಗಡದ ಮೇಸ್ತವಾಡ, ಜಿಂಚೆವಾಡ, ದೇವನಿಕವಾಡದಲ್ಲಿ ಗುರುವಾರದಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸತೀಶ್ ಸೈಲ್ ಅವರ ಚುನಾವಣೆ ಪ್ರಚಾರ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಯುವನಿಧಿ, ಗೃಹ ಲಕ್ಷ್ಮಿ, ಗೃಹ ಜೋತಿ ಎಂಬ ಯೋಜನೆಯ ಅಡಿಯಲ್ಲಿ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ರಾಜ್ಯದ ಜನರಿಗೆ ಈ ಯೋಜನೆಯಿಂದ ತುಂಬಾ ಅನುಕೂಲವಾಗಲಿದೆ ಅದಕ್ಕೆ ಈ ಸಲ ಬದಲಾವಣೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ಹೇಳಿದರು.

ಕ್ಷೇತ್ರದ ಉಸ್ತುವಾರಿಯಾದ ವಿಕಾಶ ಉಪಾಧ್ಯಾಯ ಅವರು ಕಾಂಗ್ರೆಸ್ ಪಕ್ಷವು ಕೊರೋನಾದ ಸಮಯದಲ್ಲಿ ದೇಶದ ಜನರಿಗೆ ಕಷ್ಟದ ಸಮಯದಲ್ಲಿ ನೆರವಿಗೆ ಬಂದಿದೆ. ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಸತೀಶ್ ಸೈಲ್ ಅವರು ತಮ್ಮ ಶಾಸಕರ ಅವಧಿಯಲ್ಲಿ ಮಾಡಿದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಇನ್ನೂ ತನಕ ನೋಡಲು ಸಿಗುತ್ತವೆ ಆದರೆ ಈಗೀನ ಶಾಸಕರ ಕಡೆಯಿಂದ ಹೊಸದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ಶೂನ್ಯ . ಅದೇ ರೀತಿ ನಾನು ಹಲವು ಕಡೆ ಚುನಾವಣೆ ಪ್ರಚಾರ ಸಭೆಯಲ್ಲಿ ಹೋಗಿದ್ದಾಗ ಎಲ್ಲಾ ಕಡೆ ಸತೀಶ್ ಸೈಲ್ ಬಗ್ಗೆ ಉತ್ತಮ ಅಭಿಪ್ರಾಯ ಸಿಗುತ್ತಾ ಇದೆ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ‌ ಕಡೆ ಹೆಚ್ಚು ಯವ ಸಮೂಹ ಬೆಂಬಲಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮೀನುಗಾರ ಫೆಡರೇಷನ್ ಅಧ್ಯಕ್ಷ ರಾಜು ತಾಂಡೇಲ್, ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ಕೋಮಾರಪಂಥ ಸಮಾಜದ ಮುಖಂಡ ಪ್ರಭಾಕರ ಮಾಳಸೇಕರ, ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.