ಸುದ್ದಿಬಿಂದು ಬ್ಯೂರೋ ವರದಿ
Kumta:ಕುಮಟಾ : ತಾಲೂಕಿನ ಕೋಡ್ಕಣಿಯಲ್ಲಿ ಗಾಂಜಾ ಪೆಡ್ಲರ್ (Ganja peddler)ಓರ್ವನನ್ನ ಬಂಧಿಸಿ ಗಾಂಜಾ ಹಾಗೂ ಸ್ಕೂಟರ್ ವಶಕ್ಕೆ ಪಡೆದ ಘಟನೆ ಕೋಡ್ಕಣಿಯ ಕೋಟೆ‌ ಕ್ರಾಸ್ ಬಳಿ ನಡೆದಿದೆ.

ಶರತ್ ಜರ್ನಾರ್ಧನ್ ನಾಯ್ಕ, ಬಂಧಿತ ಆರೋಪಿಯಾಗಿದ್ದಾನೆ. ಈತ ಕೋಡ್ಕಣಿ ಕೋಟೆ ಕ್ರಾಸ್ ಬಳಿ ಗಾಂಜಾ‌ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರ ಮೇಲೆ ದಾಳಿ ನಡೆಸಿದ ಪಿಎಸ್‌ಐ ಸಾವಿತ್ರಿ ನಾಯಕ ಅವರು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿ 10 ಸಾವಿರ ಬೆಲೆಯ 179ಗ್ರಾಂ ಗಾಂಜಾ ಹಾಗೂ ಮಾರಾಟಕ್ಕೆ ಬಳಸಿದ್ದ ಹೊಂಡಾ ಕಂಪನಿಯ ಡೊಯೋ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ. ಬಂಧಿಯ ಆರೋಪಿ ಕಳೆದ ಅನೇಕ‌ ದಿನಗಳಿಂದ ಬೇರೆ ಬೇರೆ ಭಾಗದ ಜನರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಮನಿಸಿ