ಬೆಂಗಳೂರು : ಗುತ್ತಿಗೆದಾರಿಂದ ಕಮೀಷನ್ ಹಣ ಪಡೆಯುತ್ತಿದ್ದ ವೇಳೆ ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಸೇರಿ ಐವರವನ್ನ ಈಗಾಗಲೆ ಲೋಕಾಯುಕ್ತರು ವಶಕ್ಕೆ ಪಡೆದುಕೊಂಡಿದ್ದು ಕೋಟಿ ಕೋಟಿ ಹಣದ ಕಂತೆ ಪತ್ತೆಯಾಗಿದೆ
ಚೆನ್ನಗಿರಿ ಶಾಸಕರ ವಿರೂಪಾಕ್ಣ ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗ ಬಿದ್ದವನಾಗಿದ್ದು, ಈತ ಗುತ್ತಿಗೆದಾರರಿಗೆ ಕಾಮಗಾರಿ ಹಂಚಿಕೆ ಮಾಡಲು ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಗುತ್ತಿಗೆದಾರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ದೂರನ್ನ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸುಮಾರು ಆರು ಕೋಟಿಗೂ ಅಧಿಕ ಹಣ ಶಾಸಕನ ಪುತ್ರನ ಮನೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ತನ್ನ ಮಗನ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿರುವ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಮಾಡಾಳ್ ವಿರೂಪಾಕ್ಷ ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಸದ್ಯ ಅವರ ಮೊಬೈಲ್ ಸ್ವೀಚ್ ಆಪ್ ಆಗಿದೆ.
ರಾತ್ರಿಯಿಂದ ನಿರಂತರವಾಗಿ ಪರಿಶೀಲನೆ ನಡೆಸಿದ ಲೋಕಾ ಅಧಿಕಾರಿಗಳು ಮನೆಯಲ್ಲಿದ್ದ ಪ್ರಮುಖ ದಾಖಲೆಗಳು ಹಾಗೂ ಲ್ಯಾಪ್‌ಟಾಪ್ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಇದೀಗ ಓರ್ವ ಶಾಸಕನ ಪುತ್ರ ಕಾಮಗಾರಿ ಹಂಚಿಕೆ ಮಾಡಲು ಗುತ್ತಿಗೆದಾರರಿಂದ ಹಣ ಪಡೆಯುವಾಗಲೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಬಿಜೆಪಿ ಸರಕಾರದಲ್ಲಿ ಕಮೀಷನ್ ವ್ಯವಹಾರ ನಡೆಯುತ್ತಿರುವು ಸಾಬೀತಾದಂತಾಗಿದೆ ಎಂದು ಕಾಂಗ್ರೆಸ್ ನಾಯಕರು ಇದೀಗ ಆರೋಪಿಸುತ್ತಿದ್ದು, ಇದನ್ನೆ ಮುಂದಿನ ದಿನದಲ್ಲಿ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.