ಸುದ್ದಿಬಿಂದು ಬ್ಯೂರೋ
ಅಂಕೋಲಾ
: ಇಲ್ಲಿನ ಬಂಡೀಬಜಾರದ ನಾಲ್ಕು ರಸ್ತೆ ಕೂಡಿದ ಚಿಕನ್ ಅಂಗಡಿಯ ಪಕ್ಕದ ಸ್ಪೋರ್ಟ್ಸ್ ಅಂಗಡಿಯ ಗೋಡೆಗೆ ಯಾರೋ ಮೂರು ಪೋಸ್ಟರಗಳನ್ನು ಅಂಟಿಸಿದ್ದಾರೆ. ಬೆಳಿಗ್ಗೆ ಹಲವರು ಇದನ್ನು ಗಮನಿಸಿದ್ದಾರೆ ಬಿಳಿ ಗಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರನಿಂದ ಬರೆದಿರುವ ಬರಹಗಳಿವೆ.

ಇಂಗ್ಲೀಷಿನಲ್ಲಿ ಬರೆದಿರುವ ಬರಹ ನಿಗೂಢವಾಗಿದ್ದು ಓದಿದರೆ ಸರಿಯಾಗಿ ಅರ್ಥವಾಗುತ್ತಿಲ್ಲ. ಮೇಲ್ಗಡೆ ಸಂಗ್ಲಾನಿ ವೆಲಫರ್ ಟ್ರಸ್ಟ್ ಎಂದು ಬರೆದಿದ್ದು ಅದರ ಕೆಳಗೆ ಪಾಕಿಸ್ತಾನ ಕಾಂಟ್ರಾಕ್ಟ್ ಎಂದು ಬರೆಯಲಾಗಿದೆ. ಮುಂದಿನ ಬರಹಗಳು ನಿಗೂಢವಾಗಿದೆ. ಕೆಲವು ಹೈಸ್ಕೂಲ್ ಮತ್ತು ಟ್ರಸ್ಟಗಳ ಹೆಸರುಗಳನ್ನು ಬರೆದಿದ್ದು ಫಾರೆಸ್ಟ, ಪೊಲೀಸ್ ಶಬ್ದಗಳನ್ನೂ ಬರೆಯಲಾಗಿದೆ. ಕೊನೆಯಲ್ಲಿ ಇಂತಿ ನಿಮ್ಮ ನಾಗರಿಕ ಎಂದು ಬರೆಯಲಾಗಿದೆ.

ಇನ್ನೊಂದು ಪೋಸ್ಟರನಲ್ಲಿ ಬರೆದಿದ್ದು ಅಲ್ಪ ಸ್ವಲ್ಪ ಅಳಿಸಿ ಹೋಗಿದೆ. ಮೂರನೆ ಪೋಸ್ಟರನಲ್ಲಿ ಹೈಸ್ಕೂಲ ಗರ್ಲ್ಸ ಎಂಡ್ ಬಾಯ್ಸ ಎಂದು ಬರೆಯಲಾಗಿದೆ. ಹಾಗೂ ನೂರು ಬಿಲಿಯನ್ ಡಾಲರ್ ಎಂದೂ ಬರೆಯಲಾಗಿದೆ. ಹಾಗೆ ನೋಡಿದರೆ ಯಾರೋ ಮಾನಸಿಕ ಅಸ್ವಸ್ಥರು ಬರೆದು ಅಂಟಿಸಿದಂತಿದೆ. ಆದರೂ ನಿರ್ಲಕ್ಷಿಸುವಂತಿಲ್ಲ ಇದನ್ನು ಅಂಟಿಸಿದವರ ಜಾಡು ಹಿಡಿದು ಇದರ ಹಿಂದೆ ಏನಾದರೂ ಉದ್ದೇಶವಿದೆಯೇ ಎನ್ನುವದನ್ನೂ ಪೊಲೀಸರು ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.