suddibindu.in
ಕಾರವಾರ: ತಾಲೂಕಿನ ಸುಂಕೇರಿ ಸೇತುವೆಯ ಮೇಲೆ ನಿಂತು ಮೀನು ಹಿಡಿಯಲು ಗಾಳ ಹಾಕಲು ಹೋಗಿದ್ದ ಆಟೋ ಚಾಲಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ನಗರದ ಕಡವಾಡ ಮೂಲದ ಆಟೋ ಚಾಲಕನಾಗಿದ್ದ ಲಿಪೋನಿಯೋ ಮಾನುವೆಲ್ ಡಿಸೋಜಾ(59) ಮೃತ ವ್ಯಕ್ತಿಯಾಗಿದ್ದಾನೆ. ಈತ ಕಾರವಾರದ ಸುಂಕೇರಿ ಸೇತುವೆಯ ಮೇಲೆ ನಿಂತು ಮೀನಿಗೆ ಗಾಳ ಹಾಕುತ್ತಿದ್ದ, ಈ ವೇಳೆ ಕಾಲು ಜಾರಿ ಬಿದ್ದು ಕಾಳಿ ನದಿಯ ಹಿನ್ನೀರಿನಲ್ಲಿ ಕಾಣೆಯಾಗಿದ್ದ, ಸೇತುವೆಯ ಸ್ವಲ್ಪ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ