suddibindu.in
ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿ ಓರ್ವರಿಗೆ ಅಲ್ಲಿನ ವೈದ್ಯರು ಅವಾಚ್ಯ ಶಬ್ಧದಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿ ಮಹಿಳೆ ಓರ್ವಳು ವೈದ್ಯರಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಮುಳೆತಜ್ಞ ವೆಂಕಟೇಶ್ ಎಂಬುವವರಿಗೆ ಮಹಿಳೆ ಚಪ್ಪಲಿಯಿಂದ ಹೊಡೆದು,ಶರ್ಟ್, ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ ಹಲ್ಲೆ ಮಾಡಿದ್ದಾಳೆ.ಹಲ್ಲೆಯ ಮಾಡಿರುವ ಮಹಿಳೆಯ ಸಹೋದರ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದ್ದ ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ.ಈ ವೇಳೆ ಅಲ್ಲಿನ ವೈದ್ಯ ವೆಂಕಟೇಶ ಎಂಬುವವರು ಆ ಯುವಕನ ಅಕ್ಕನಿಗೆ ವೈದ್ಯ ಅವಾಚ್ಯ ಶಬ್ದದಿಂದ ಬೈದು ನಿಂಧಿಸಿದ್ದಾರೆಂದು ಆರೋಪಿಸಲಾಗಿದೆ. ವೈದ್ಯರು ಚಿಕಿತ್ಸೆಯಲ್ಲಿ ಇರುವಾಗಲೆ ಸ್ಥಳಕ್ಕೆ ಬಂದ ಮಹಿಳೆ ವೈದ್ಯ ವೆಂಕಟೇಶ ಅವರ ಶರ್ಟ್‌ನ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ ಚಪ್ಪಲಿಯಿಂದ ಹೊಡೆದಿದ್ದಾರೆ.
ಏಕಾಏಕಿಯಾಗಿ ಓರ್ವ ಮಹಿಳ ವೈದ್ಯರ ಮೇಲೆ ಹಲ್ಲೆ ಮಾಡಿರುವುದನ್ನ ಖಂಡಿಸಿರುವ ಆಸ್ಪತ್ರೆಯ ಉಳಿದ ವೈದ್ಯರು ಹಾಗೂ ಸಿಬ್ಬಂದಿಗಳು ತಕ್ಷಣ ಓಪಿಡಿ ಬಂದ್ ಮಾಡಿ ಹಲ್ಲೆ ಮಾಡಿರುವ ಮಹಿಳೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೆ ಅಲ್ಲದೆ ತಮ್ಮಗೆ ರಕ್ಷಣೆ ನೀಡಬೇಕು ಎಂದು ಅಗ್ರಹಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ