ಸುದ್ದಿಬಿಂದು ಬ್ಯೂರೋ
ಕಾರವಾರ
: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಸೇರಿದಂತೆ ಜಿಲ್ಲೆಯಾದ್ಯಂತ ಗುಡುಗು ಸಹಿತ ಮುಂಗಾರು ಮಳೆ ಆರಂಭವಾಗಿದೆ‌.

ಇಂದು ಬೆಳಗ್ಗೆಯಿಂದ ಜಿಲ್ಲೆಯ ಕಾರವಾರದಿಂದ ಭಟ್ಕಳದವರಗೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಹೊನ್ನಾವರ,ಕುಮಟಾ,ಭಟ್ಕಳ,ಕಾರವಾರ ಭಾಗದಲ್ಲಿ ವರುಣನ ಅಬ್ಬರ ಜೋರಾಗಿದೆ.ಬಿಸಿಲ ತಾಪಕ್ಕೆ ಕಾದು ಕಬ್ಬಿಣದಂತಾದ ಭೂಮಿಗೆ ವರುಣ ಆಗಮನದಿಂದ ತಂಪೆರದಂತಾಗಿದೆ.

ಭಾರೀ ಮಳೆಗೆ ರಸ್ತೆಗಳಲ್ಲಿ ನೀರು ತುಂಬಿಕೊಂಡು ಸರವಾರರು ಪರದಾಡುವಂತಾಗಿದೆ. ಇನ್ನೂ ಜಿಲ್ಲೆಯ ಪ್ರವಾಸಿ ತಾಣಕ್ಕೆ ಬಂದ ಪ್ರವಾಸಿಗರು ದಿಢೀರ್ ಮಳೆಯಿಂದ ‌ಮಳೆಯಲ್ಲಿ ನೆಂದ್ದು ವಾಪಸ್ ಆಗುವಂತಾಗಿದೆ.