ಮುಂಡಗೋಡ : ಭತ್ತದ ಕಣಜ ಎಂದೆ ಪ್ರಖ್ಯಾತಿ ಹೊಂದಿರುವ ಮಂಡಗೋಡದಲ್ಲಿ ಇಂದು ಹಲವು ಬಿಜೆಪಿ ಮುಖಂಡರ ಸಮುಖದಲ್ಲಿ ಬೈಕ್ ರ್ಯಾಲಿ ಹಾಗೂ ಬೃಹತ್ ಬಿಜೆಪಿ ಸಮಾವೇಶ ನಡೆದಿದ್ದು,ಬೈಕ್ ರ್ಯಾಲಿಯಲ್ಲಿ ಸಚಿವ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ಜನರತ್ತ ಕೈ ಬಿಸಿ ಹುರಿದಬಿಸಿದ್ದಾರೆ.

ರ‌್ಯಾಲಿಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದು, ರ‌್ಯಾಲಿ ಉದ್ದಕ್ಕೂ ಶಿವರಾಮ ಹೆಬ್ಬಾರ್ ಪರ ಜೈಯ ಘೋಷಗಳು ಮೊಳಗಿದವು. ಇನ್ನೂ ಇನ್ನೂ ತೆರದ ವಾಹನದಲ್ಲಿ ಮಾಜಿ ಸಿ ಎಂ ಜಗದೀಶ್ ಶೆಟ್ಟರ್ ಜೊತೆಯಲ್ಲಿದ್ದ ಹೆಬ್ಬಾರ್ ರ‌್ಯಾಲಿ ಸಾಗುವ ಮಾರ್ಗದ ಉದ್ದಕ್ಕೂ ಜನರತ್ತ ಕೈ ಬಿಸಿ ನಗು ಬಿರುತ್ತ ಸಾಗಿದ್ದರು..

ಮಟ್ಟದಲ್ಲಿ ಸುಮಾರು ನಾಲ್ಕು ಕಿ.ಮಿ ಬೈಕ್ ರ‌್ಯಾಲಿ ನಡೆಸಲಾಗಿದ್ದು, ರ‌್ಯಾಲಿ ಸಾಗುವ ಎಲ್ಲಾ ರಸ್ತೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಇದರ ಬಳಿಕ ಕರಗಿನಕೊಪ್ಪದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶಕ್ಕೆ ಈಗಾಗಲೇ ಹತ್ತು ಸಾವಿರಕ್ಕೂ ಅಧಿಕ ಆಸನಗಳನ್ನ ಹಾಕಲಾಗಿದೆ.