ಮುಂಡಗೋಡ : ಯಾರೆ‌‌..ಕೂಗಾಡಲಿ‌ ಊರೆ ಹೋರಾಡಲಿ ನೆಮ್ಮದಿಗೆ ಭಂಗವಿಲ್ಲ ಎನ್ನುವ ಸಂಪತ್ತಿಗೆ ಸವಾಲು ಚಿತ್ರಗೀತೆಯ ಹಾಡು ಹೇಳುವ ಮೂಲಕ ಈ ಭಾರಿ ಚುನಾವಣೆಯಲ್ಲಿ ಯಾರೆ ಎಷ್ಟೆ ನನ್ನ ವಿರುದ್ಧ ಕೂಗಾಡಿದ್ದರೂ ಕ್ಷೇತ್ರದ ಜನ ನನ್ನ ಕೈಬಿಡೋದಿಲ್ಲ, ಯಾರ ಭಯವೂ ಇಲ್ಲ ಎಂದು ಹೇಳುವ ಮೂಲಕ, ವಿರೋಧಿಗಳು ತನ್ನ ವಿರುದ್ಧ ಅದೆಷ್ಟೆ ರಣತಂತ್ರ ರೂಪಿಸಿದ್ದರು ಕೂಡ ಮುಂಡಗೋಡ ಜನತೆ‌ ಜೊತೆಗೆ ಇರೋ ತನಕ ಸೋಲಿಲ್ಲ ಎನ್ನುವ ಮೂಲಕ ಸಚಿವ ಶಿವರಾಮ ಹೆಬ್ಬಾರ್ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮುಂಡಗೋಡದಲ್ಲಿ ಇಂದು ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತ್ನಾಡುವ ವೇಳೆ ಸಂಪತ್ತಿಗೆ ಸವಾಲು ಚಿತ್ರಗೀತೆಯ ಹಾಡುವ ಮೂಲಕ ಮುಂಡಗೋಡಿನ ಜನ ನನ್ನ ಜತೆ ಇರೊವರೆಗೆ..ಯಾರು ಏನೆ ಅಂದ್ರು ತಲೆ ಕೆಡಿಸಿಕೊಳ್ಳಲ್ಲ ಗೆಲುವು ನಂದೆ ಎಂದು ವಿರೋಧ ಪಕ್ಷಕ್ಕೆ ಸಂದೇಶ ರವಾನಿಸಿದ್ರು.
ಹೆಬ್ಬಾರ್ ಅವರ ಹಾಡು ಕೇಳುತ್ತಿದ್ದಂತೆ ಬೃಹತ್ ಸಂಖ್ಯೆಯಲ್ಲಿ ಸೇರಿದ ಜನರು ಹೆಬ್ಬಾರ್ ಅವರ ಹಾಡಿಗೆ ಸಿಳ್ಳೆ ಚಪ್ಪಾಳೆ ಸುರಿಮಳೆ ಕೇಳಿಬಂತು.

ಇಂದಿನ ಈ ಸಮಾವೇಶದಲ್ಲಿ ಸೇರಿದ ಜನರ ಉತ್ಸಾಹ ನೋಡಿದ್ದರೆ‌ ಹೆಬ್ಬಾರ್ ಅವರು ತಮ್ಮ ಭಾಷಣದಲ್ಲಿ ಹೇಳಿದಂತೆ ಯಾರೆ ಎಷ್ಟೆ ಕೂಗಾಡಿದ್ದರು ಸದ್ಯ ಕ್ಷೇತ್ರದ ಮತದಾರರು ಈ ಬಾರಿ ಕೂಡ ಕೈ ಹಿಡಿಯುವ ಚಿತ್ರಣ ಕಂಡು ಬರುತ್ತಿದೆ.