ಸುದ್ದಿಬಿಂದು ಬ್ಯೂರೋ
ಕಾರವಾರ : ಲೋಕಸಭಾ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೆ ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನ ಘೋಷಣೆ ಮಾಡಲು ಮುಂದಾಗಿದ್ದು, ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಮೇಲೆ ಕಾಂಗ್ರೆಸ್ ಹೈಕಮಾಂಡ ಒತ್ತಡ ಹಾಕುತ್ತಿದೆ ಎನ್ನುವ ಚರ್ಚೆ ಜೋರಾಗಿದೆ..


ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಅಂಜಲಿ ನಿಂಬಾಳ್ಕರ್,ಬಿ ಕೆ ಹರಿಪ್ರಸಾದ, ರವೀಂದ್ರನಾಥ್ ನಾಯ್ಕ ಹಾಗೂ ನ್ಯಾಯವಾದಿ ಜಿ ಟಿ ನಾಯ್ಕ, ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿದೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಂಕಾಳ ವೈದ್ಯ ಅವರಿಗೆ ಲೋಕಸಭಾ ಚುನಾವಣೆ ಸ್ಪರ್ಧಿಸುವಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಸೇರಿದಂತೆ ಹಲವು ನಾಯಕರು ಮಂಕಾಳು ವೈದ್ಯಾ ಅವರಿಗೆ ಲೋಕಸಭಾ ಚುನಾವಣೆ ಸ್ಪರ್ಧೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ ಎನ್ನುವ ಬಗ್ಗೆ ಕೇಳಿ ಬರತ್ತಾ ಇದೆ.

ಸಚಿವ ಮಧು ಬಂಗಾರಪ್ಪಗೆ ಚೆಕ್ ಬೌನ್ಸ್ ಪ್ರಕರಣ : 6ಕೋಟಿ 96ಲಕ್ಷ 70 ಸಾವಿರ ತುಂಬದೆ ಹೋದರೆ ಜೈಲು….

ಆದರೆ ಇದಕ್ಕೆ ಸಚಿವ ಮಂಕಾಳು ವೈದ್ಯ ಅವರು ಇದುವರೆಗೆ ಮನಸ್ಸು ಮಾಡಿಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಮಂಕಾಳು ವೈದ್ಯ ಅವರು ಸ್ಪರ್ಧೆ ಮಾಡಲು ಹಿಂದೇಟು ಹಾಕಿದರೆ ಅವರು ಹೇಳಿದ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೇಟ್ ನೀಡುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಸದ್ಯದಲ್ಲೆ ಅನ್ಯ ಪಕ್ಷದ ಪ್ರಭಾವಿ ಮುಖಂಡ ನೋರ್ವನಿಗೆ ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ಸಹ ನಡೆಯುತ್ತಿದೆ. ಸಿ ಎಂ ಸಿದ್ದರಾಮಯ್ಯ, ಡಿ ಸಿ ಎಂ ಡಿ ಕೆ ಶಿವಕುಮಾರ ಸೇರಿದಂತೆ ಕಾಂಗ್ರೆಸ್ ನ ಪ್ರಮುಖ ನಾಯಕರ ಸಮುಖದಲ್ಲಿ ಆ ಅನ್ಯಪಕ್ಷದ ಪ್ರಭಾವಿ ಮುಖಂಡನಿಗೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅಂದೆ ಟಿಕೇಟ್ ಘೋಷಣೆ ಮಾಡುವ ಸಾಧ್ಯತೆ ಕೂಡ ಇದೆ.