ಬೆಂಗಳೂರು: ಕಾಂಗ್ರೆಸ್ ನ ಐದು ಗ್ಯಾರಂಟಿ ಯಲ್ಲಿ ಒಂದಾಗಿರುವ ಗೃಹಜ್ಯೋತಿ (Gruh jyothi) ಯೋಜನೆಗೆ ರಾಜ್ಯದಲ್ಲಿ ಅಗಸ್ಟ್ 05ರಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ.

ಈ ಯೋಜನೆಯನ್ನ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ,( Cm Siddaramaiah) ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಸೇರಿ ಕಾಂಗ್ರೆಸ್ ನ ಪ್ರಮುಖ ಸಚಿವರು,ಶಾಸಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯಾದ್ಯಂತ ಒಟ್ಟು 2.16 ಕೋಟಿ (crore) ಮನೆಗಳು ವಿದ್ಯುತ್ ಸಂಪರ್ಕಗಳನ್ನು ಹೊಂದಿದ್ದು, ಈಗಾಗಲೇ ಈ ಯೋಜನೆಗೆ 1.40 ಕೋಟಿ ಜನ ನೋಂದಣಿಮಾಡಿಸಿಕೊಂಡಿದ್ದು,.ಜುಲೈ 27ರ ಒಳಗೆ ನೊಂದಾಯಿಸಿಕೊಂಡವರಿಗೆ ಜುಲೈ ತಿಂಗಳಲ್ಲಿ ಬಳಸಿದ ವಿದ್ಯುತ್ ಉಚಿತವಾಗ ಸಿಗಲಿದೆ ಎಂದು ಸರಕಾರ ಆದೇಶಿಸಿದೆ.

)