ಸುದ್ದಿಬಿಂದು ಬ್ಯೂರೋ
ಬೆಂಗಳೂರು: ಲೋಕಸಭೆ ಚುನಾವಣೆಗಾಗಿ(Lok Sabha Elections ) ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ (Hdkumaraswamy) ಅವರು ಎಲ್ಲಾ 28 ಕ್ಷೇತ್ರಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ.

ಉತ್ತರ ಕನ್ನಡ ಉಸ್ತುವಾರಿಯನ್ನಾಗಿ: ಜೆಡಿಎಸ್ ಯುವ ಮುಖಂಡರಾಗಿದ್ದ ಸೂರಜ್ ಸೋನಿ ನಾಯ್ಕ‌ ಅವರಿಗೆ ಲೋಕಸಭಾ ಚುನಾವಾ ಉಸ್ತುವಾರಿ ಜವಾಬ್ದಾರಿಯನ್ನ ನೀಡಲಾಗಿದೆ. ಇನ್ನೂ ಸಹ ಉಸ್ತುವಾರಿಯಾಗಿ: ನಾಜೀರ್ ಬಾಪುಲ್ ಸಾಬ್, ಉಪೇಂದ್ರ ಪೈ ಅರಿಗೆ ನೀಡಲಾಗಿದೆ. ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಸೂರಜ್ ನಾಯ್ಕ ಅವರಿಗೆ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಸಲಿದ್ದಾರೆ ಎನ್ನುವ ಮಾತು ಸಹ ಇದೀಗ ಜೋರಾಗಿ ಕೇಳಿ‌‌ ಬರುತ್ತಿದೆ.

ಇನ್ನೂ ಬೆಳಗಾವಿ ಉಸ್ತುವಾರಿ: ಶಂಕರ ಮಾಡಳಗಿಸಹ ಉಸ್ತುವಾರಿ: ನಾಜೀರ್ ಭಗವಾನ್,ಹಾವೇರಿ ಉಸ್ತುವಾರಿ: ಮಂಜುನಾಥ್ ಎಸ್ ಗೌಡ ಶಿವಣ್ಣನವರ್ಸಹ ಉಸ್ತುವಾರಿ: ಶಂಕರ ಬಾಳೆಕಾಯಿ,ಮುಕ್ತುಂ ಸಾಬ್, ವೆಂಕನಗೌಡ ಗೋವಿಂದಗೌಡ, ಧಾರವಾಡ ಉಸ್ತುವಾರಿ: ಅಲ್ಕೊಡ್ ಹನುಮಂತಪ್ಪಸಹ ಉಸ್ತುವಾರಿ: ಗುರುರಾಜ್ ಹುಣಸೀಮರದ, ಕಲ್ಲಪ್ಪ ನಾಗಪ್ಪ ಗದ್ದಿ, ವೀರಭದ್ರಪ್ಪ ಹಾಲಹರವಿ ಸೇರಿ ರಾಜ್ಯದ 28ಕ್ಕೂ ಕ್ಷೇತ್ರಕ್ಕೂ ಲೋಕಸಭಾ ಚುನಾವಣಾ ಉಸ್ತುವಾರಿ‌ ನೀಡಲಾಗಿದೆ.