ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆ ಏರಿಕೆಯಾಗುತ್ತಿದ್ದು,ಸಿದ್ದಾಪುರ ತಾಲೂಕಿನಲ್ಲಿ 14 ದಿನದಲ್ಲಿ 37ಜನರಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿದ್ದು, ಮೂರು ಮಂಗಗಳು ಸಾವನ್ನಪ್ಪಿದೆ.

ಮಂಗನಕಾಯಿಲೆ(KFD)ಏರಿಕೆ ಆಗುತ್ತಿರುವ ಕಾರಣ ಜನರು ಕಾಡಿಗೆ ತೆರಳಿ ದರಕು ತರುವುದು,ಸೊಪ್ಪು ತರಲು ತೆರಳುವವರಿಗೆ ಉಣುಗು (ticks)ಕಚ್ಚಿ ಇದರಿಂದ ಹೆಚ್ಚು ಜನರು (KFD)ಗೆ ಒಳಗಾಗುತಿದ್ದಾರೆ. ಈ ರೋಗಕ್ಕೆ (Monkey Fever) ಚುಚ್ಚು ಮದ್ದು ಸಹ ಇಲ್ಲ.ಈ ಹಿಂದೆ ನೀಡಲಾಗುತ್ತಿದ್ದ ಚುಚ್ಚುಮದ್ದನ್ನು ನಿಷೇಧ ಮಾಡಲಾಗಿದೆ.ಹೀಗಾಗಿ ಹೊಸ ಚುಚ್ಚುಮದ್ದನ್ನು ಕಂಡುಹಿಡಿಯುವ ವರೆಗೆ ರೋಗಕ್ಕೆ ತುತ್ತಾದವರು ಸಂಕಷ್ಟಕ್ಕೆ ಸಿಲುಕಬೇಕಾದ ಪರಿಸ್ಥಿತಿ ಉಂಟಾಗಿದೆ.

ಸಿದ್ಧಾಪುರದ ಕೊರ್ಲಕೈನಲ್ಲಿ ಸೋಂಕಿನಿಂದ ಮಂಗಗಳು ಸಾವನ್ನಪ್ಪಿದೆ.ಸೂಕ್ತ ವ್ಯಾಕ್ಸಿನ್ ಇಲ್ಲದ್ದರಿಂದ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಈ ಕಾಯಿಲೆ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಮುಂಜಾಗ್ರತೆ ಮೂಡಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ.

16ಜನ ಸಿದ್ದಾಪುರ ತಾಲೂಕಾ ಆಸ್ಪತ್ರೆ, ಇಬ್ಬರೂ ಸಿದ್ದಾಪುರ ಶ್ರೇಯಸ್ ಆಸ್ಪತ್ರೆ,ಮೂರು ಮಂದಿ, 3 ಮಣಿಪಾಲ ಆಸ್ಪತ್ರೆ, 1 ಮಂಗಳೂರು ಆಸ್ಪತ್ರೆ, 2 ಸಾಗರ ತಾಲೂಕು ಆಸ್ಪತ್ರೆಯಲ್ಲಿ ಸೋಂಕಿತರು ದಾಖಲಾಗಿದ್ದಾರೆ. ಒಟ್ಟು 24 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಉಲ್ಭಣಗೊಳ್ಳುತ್ತಿರುವ ಬೆನ್ನಲ್ಲೇ ಮಂಗನ ಸಾವಿನಿಂದ ಸಿದ್ಧಾಪುರದ ಜನರು ಆತಂಕದಲ್ಲಿದ್ದಾರೆ.

ಮಂಗನಕಾಯಿಲೆ ಬಗ್ಗೆ ಮಾಧ್ಯಮ ಹೇಳಿಕೆ ನೀಡಲು ಜಿಲ್ಲಾಡಳಿತ ಹಿಂದೇಟುವಹಾಕುತ್ತಿದ್ದು, ಈ ಬಗ್ಗೆ ಯಾವುದೆ ಮಾಹಿತಿಗಳು ನೀಡುತ್ತಿಲ್ಲ. ಮಂಗಗಳು ಸಾವನಪ್ಪಿವೆಯಾದರು ಕೂಡ‌‌‌ ಯಾವ ಕಾರಣಕ್ಕೆ ಸಾವನ್ನಪ್ಪಿದೆ ಅಂತಾ ಖಚಿತ ಮಾಹಿತಿ ಇಲ್ಲ ಎಂಬುದಾಗಿ ಅಧಿಕಾರಿಗಳ ಹೇಳುತ್ತಿದ್ದಾರೆ.