ಸುದ್ದಿಬಿಂದು ಬ್ಯೂರೋ
Murudeshwar: ಮುರುಡೇಶ್ವರ : ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೂರುಡೇಶ್ವರ ರಾಜ್ಯದಲ್ಲಿಯೇ ತನ್ನದೆ ಆದ ಛಾಪು ಮೂಡಿಸಿದೆ. ನಿತ್ಯವೂ ಸಾವಿರಾರು ಪ್ರವಾಸಿಗರು ಇಲ್ಲಿನ ಕಡಲತೀರದಲ್ಲಿ ಕುಣಿದು ಕುಪ್ಪಳಿಸ್ತಾರೆ,ಪ್ರವಾಸಿ ತಾಣವನ್ನಾಗಿ ಇನ್ನಷ್ಟು ಅಭಿವೃದ್ದಿ ಮಾಡಬೇಕು ಎನ್ನುವ ಸರಕಾರದ ಪ್ರಯತ್ನದ ಅಂಗವಾಗಿ ಇದೀಗ ಪ್ಲೋಟಿಂಗ್ ಜಟ್ಟಿಯೊಂದು ಇದೀಗ ಪ್ರವಾಸಿಗರಿಗಾಗಿ ತೆರೆದುಕೊಂಡಿದೆ. ರಾಜ್ಯದಲ್ಲಿಯೇ ಅತೀ ದೊಡ್ಡ ಪ್ಲೋಟಿಂಗ್ ಬ್ರೀಡ್ಜ್ (Plotting Bridge) (ಸಮುದ್ರ ಅಲೆಯ ಮೇಲೆ ನಡೆದಾಡುವ ಸೇತುವೆ) ಆರಂಭವಾಗಿದೆ.ಪ್ಲೋಟಿಂಗ್ ಬ್ರೀಡ್ಜ್ ಗೆ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದ್ದಾರೆ.
ಉತ್ತರಕನ್ನಡ(Utarakannda) ಜಿಲ್ಲೆ ಅಂದರೆ ಅದು ಪ್ರವಾಸಿಗರ ಪಾಲಿನ ಸ್ವರ್ಗ ಮುರುಡೇಶ್ವರ ಸೇರಿದಂತೆ ಜಿಲ್ಲೆಯ ಗೋಕರ್ಣ,ಯಾಣ,ದಾಂಡೇಲಿ ಹೀಗೆ ಹತ್ತಾರು ಪ್ರವಾಸಿ ತಾಣಗಳು ಪ್ರವಾಸಿಗರ ಕಣ್ಮುಂದೆ ತೆರೆದುಕೊಳ್ಳುತ್ತವೆ. ಅದರಲ್ಲೂ ಮುರುಡೇಶ್ವರ ಕಡಲತೀರದಲ್ಲಿರುವ(Murudeshwar Beach) ಜಲಸಾಹಸ ಕ್ರೀಡೆಯಂತು. ಪ್ರವಾಸಿಗರನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದೆ.ಅದರಲ್ಲೂ ಇದೀಗ ಪ್ಲೋಟಿಂಗ್ ಬ್ರೀಡ್ಜ್ ಪ್ರವಾಸಿಗರಿಗೆ ಮತ್ತಷ್ಟು ಮಜಾ ನೀಡಲಿದೆ. ನೇತ್ರಾಣಿ ಗಣೇಶ ಅವರು ಪ್ರವಾಸಿಗರಿಗಾಗಿ ಒಂದಲ್ಲ ಒಂದು ಹೊಸ ಹೊಸ ಜಲಸಾಹ ಕ್ರೀಡೆ ಒತ್ತುನೀಡುತ್ತಾ ಬಂದಿದ್ದಾರೆ.
ವಿಕ್ ಎಂಡ್ ನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರು ಮುರುಡೇಶ್ವರಕ್ಕೆ ಆಗಮಿಸುತ್ತಾರೆ.ಸಾಲು ಸಾಲು…ರಜೆಗಳು ಬಂದರೆ ಸಾಕು ಮಹಾನಗರದಲ್ಲಿ ನೆಲಸಿರೋ ಜನರೆಲ್ಲಾ ನೇರವಾಗಿ ಮೂರುಡೇಶ್ವರಕ್ಕೆ ಆಗಮಿಸಿರತ್ತಾರೆ.ಈಗಾಗಲೇ ಮೂರುಡೇಶ್ವರದಲ್ಲಿರುವ ನೇತ್ರಾಣಿ ಅಂಡ್ವೇಚರ್ ಸ್ಕೂಬಾ ಡೈವಿಂಗ್ ರಾಜ್ಯದ್ಯದಲ್ಲಿರುವ ಏಕೈಕ ಸ್ಕೂಬ್ ಡೈವಿಂಗ್ ಆಗಿದೆ, ಇದುವರೆಗೆ ಸಾವಿರಾರು ಪ್ರವಾಸಿಗರು ಸ್ಕೂಬಾ ಡೈವಿಂಗ್ (Scuba diving)ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರ ನಡುವೇ ಇದೀಗ ಪ್ಲೋಟಿಂಗ್ ಬ್ರೀಡ್ಜ್ ಸೇರ್ಪಡೆಗೊಂಡಿದ್ದು ಇದೂ ಸಹ ಜಿಲ್ಲೆಯಲ್ಲಿ ಮೊಟ್ಟ ಮೊದಲ ಪ್ಲೋಟಿಂಗ್ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೂ ಹೆಚ್ಚಿನ ಪ್ರವಾಸಿಗರನ್ನ ಉತ್ತರಕನ್ನಡ ಜಿಲ್ಲೆಯತ್ತ ಸೆಳೆಯಲು ಇದು ಕೂಡ ಅನುಕೂಲಕರವಾಗಲಿದೆ.ಈ ಪ್ಲೋಟಿಂಗ್ ಬ್ರಿಡ್ಜ್ ನಲ್ಲಿ 130ಮೀ ವರೆಗೂ ಈ ಓಟಾಟ ಮಾಡಬಹುದಾಗಿದೆ. ನೇತ್ರಾಣಿ ಮತ್ತು ಓಶಿಯನ್ ಅಡ್ವೆಂಚರ್ ನಿಂದ ಈ ಪ್ಲೋಟಿಂಗ್ ಬ್ರಿಡ್ಜ್ ಆರಂಭವಾಗಿದೆ, ಮುರುಡೇಶ್ವರಕ್ಕೆ ಬಂದು ಸ್ಕೂಬಾ ಮಾಡುವುದರ ಜೊತೆಗೆ ಇದೀಗ ಪ್ಲೋಟಿಂಗ್ ಬ್ರಿಡ್ಜ್ ಮೇಲೆ ನಡೆದಾಡೋ ಮೂಲಕ ಪ್ರವಾಸಿಗರು ಏಂಜಾಯ್ ಮಾಡಬಹುದಾಗಿದೆ,
ಏಕಕಾಲದಲ್ಲಿ 150 ಮಂದಿ ಪ್ರವಾಸಿಗರು ಈ ಪ್ಲೋಟಿಂಗ್ ಬ್ರೀಡ್ಜ್ ಮೇಲೆ ಓಡಾಟ ಮಾಡಬಹುದಾಗಿದೆ. ಇದನ್ನ ಮುಂಬೈನ್ ಎಚ್ ಎನ್ ಮರೈನ್ ಕಂಪನಿ ನಿರ್ವಹಣೆ ಮಾಡಿದೆ. ಮೊದಲ ದಿನವೇ ನೂರಾರು ಪ್ರವಾಸಿರು ಈ ಪ್ಲೋಟಿಂಗ್ ಬ್ರಿಡ್ಜ್ ಮೇಲೆ ಓಡಾಟ ಮಾಡುವ ಮೂಲಕ ಏಂಜಾಯ್ ಮಾಡಿದ್ದಾರೆ,ಆರಂಭದ ದಿನದಲ್ಲಿಯೇ ಪ್ರವಾಸಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಮುರುಡೇಶ್ವರ ಕಡಲತೀರದಲ್ಲಿ ಈಗ ಸ್ಕೂಬ್ ಡೈವಿಂಗ್, ಪ್ಲೋಟಿಂಗ್ ಬ್ರಿಡ್ ಮೇಲಿನ ನಡಿಗೆ, ಬೋಟ್ ರೈಡ್,ಜಾರ್ಬಿನ್ ರೋಲ್, ಎಲ್ಲವೂ ಸಹ ಒಳಗೊಂಡಿದ್ದು, ಮತ್ತಷ್ಟು ಪ್ರವಾಸಿಗರನ್ನ ಆಕರ್ಷಿಸುವಂತಾಗಿದೆ..
ಮುರುಡೇಶ್ವರದಲ್ಲಿ. ಈ ಮೊದಲೆ ಆರಂಭವಾಗಿರುವ. ಸ್ಕೂಬಾ ಡೈವಿಂಗ್ ಮೂಲಕ ಸಾಕಷ್ಟು ಪ್ರವಾಸಿಗರನ್ನ ಜಿಲ್ಲೆಯತ್ತ ಸೆಳೆಯುವಂತೆ ಮಾಡಿರುವ ನೇತ್ರಾಣಿ ಅಡ್ವೆಂಚರ್ ಇದೀಗ ಓಶಿಯನ್ ಅಡ್ವೆಂಚರ್ ಪ್ಲೋಟಿಂಗ್ ಬ್ರಿಡ್ಜ್ ಮೂಲಕ ಮತ್ತಷ್ಟು ಪ್ರವಾಸಿಗರನ್ನ ಜಿಲ್ಲೆಯತ್ತ ಸೆಳೆಯಲಿದೆ.ಆರಂಭದಲ್ಲೆ ಇದಕ್ಕೆ ಪ್ರವಾಸಿಗರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.