ಸುದ್ದಿಬಿಂದು ಬ್ಯೂರೋ
ಕಾರವಾರ :ರಾಜ-ಮಹರಾಜರ ಆಳ್ವಿಕೆಯಿಂದ ನಡೆದುಕೊಂಡು ಬಂದಿರುವ ಉತ್ತರಕನ್ನಡ ಜಿಲ್ಲೆಯ ಕಾರವಾರದ ಪದ್ಮನಾಭ ತೀರ್ಥ ಸ್ವಾಮಿಜೀ ಗುರುಮಠದಲ್ಲಿ ಕಾನೂನು ‌ಬಾಹಿರ‌ ಸಮಿತಿ ರಚನೆ‌ ಮಾಡಿಕೊಂಡಿದ್ದು,‌ಇಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಗುರುಮಠದ ಹಾಲಿ ಅಧ್ಯಕ್ಷ ಸಂತೋಷ ‌ಗುರುಮಠ ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಅವರು ಇಂದು ಕಾರವಾರದ ಪತ್ರಿಕಾಭನದಲ್ಲಿ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿ. ಈ ಮಠಕ್ಕೆ130 ವರ್ಷಗಳ ಇತಿಹಾಸ ಇದೆ. ಮೊದಲಿನಿಂದಲ್ಲೂ ಈ ಮಠವನ್ನ ವ್ಯವಸ್ಥಾಪನಾ ಸಮಿತಿಯೇ ನೋಡಿಕೊಂಡು ಬರುತ್ತಿದ್ದೆ.ಮಠದಲ್ಲಿ ಸಂಘ‌ ರಿಜಿಸ್ಟರ್ ಮಾಡುವಂತಿಲ್ಲ. ಆದರೂ ಸೊಸೈಟಿ ಆ್ಯಕ್ಟ್ ಪ್ರಕಾರ ನವೆಂಬರ್ 11-2023ರಲ್ಲಿ ಕಾನೂನು ಬಾಹಿರವಾಗಿ ಸಮಿತಿಯನ್ನ ರಚನೆ ಮಾಡಿಕೊಂಡಿದ್ದಾರೆ,ಸಮಿತಿಯವರು ಸ್ವತಃ ಮಠದಂತೆ ಮಾಡಿಕೊಳ್ಳುತ್ತಿದ್ದಾರೆ. ಮಠದ ಲಾಕರ್ ಕೀ ನಮ್ಮ ಬಳಿ ಇದೆ. ಹೀಗಿರುವಾಗ ಅಲ್ಲಿರುವ ಲಾಕರ್ ಒಡೆದು ಅದರಲ್ಲಿದ್ದ ಕೋಟ್ಯಾಂತರ ಚಿನ್ನಾಭರಣ ಹಾಗೂ ಹಣ ದೋಚಿಕೊಂಡಿದ್ದಾರೆ. ನಮ್ಮ ಹತ್ತಿರ ಕೀ ಇರುವಾಗ ಆ ಲಾಕರ್ ಹೇಗೆ ಒಡೆದರು ಎನ್ನುವುದು ಗೋತ್ತಾಗಬೇಕು ಎಂದಿದ್ದಾರೆ.

ನಾನು ಅಧ್ಯಕ್ಷಸ್ಥಾನದಲ್ಲಿದ್ದರೂ, ನಮ್ಮಗೆ ಒಳಗೆ ಹೋಗಲು ಬಿಡುತ್ತಿಲ್ಲ.ಅಲ್ಲಿರುವವರೆಲ್ಲರೂ ರೌಡಿಗಳು,ಇವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಪ್ರಕರಣಗಳಿದೆ‌. ಮಠ ಹಾಳಾಗಲು,ಅಧಿಕಾರಿಗಳು,‌ ಪೊಲೀಸರು ಹಾಗೂ ಜನಪ್ರತಿನಿಧಿಗಳು ಕಾರಣ ಎಂದು ಸಂತೋಷ ಗುರುಮಠ ಆರೋಪಿಸಿದ್ದಾರೆ.ಯಾವುದೋ ಒತ್ತಡಕ್ಕೆ ಒಳಗಾಗಿ ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಾವು ಪ್ರಕರಣ ದಾಖಲಿಸಲು ಹೋದರೆ ಪೊಲೀಸ್ ಠಾಣೆಯಲ್ಲಿಯೂ ಸಹ ಪ್ರಕರಣ ತೆಗೆದುಕೊಳ್ಳುತ್ತಿಲ್ಲ. ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವಾಗಲ್ಲೂ ಲಾಕರ್ ಒಡೆಯುವುದು, ಕಾಣಿಕೆ ಹಣ ತೆಗೆಯುವುದನ್ನ ಮಾಡುತ್ತಿದ್ದಾರೆ.ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಂತೋಷ ಗುರುಮಠ ಆಗ್ರಹಿಸಿದ್ದಾರೆ.