ಸುದ್ದಿಬಿಂದು ಬ್ಯೂರೋ
ಚಿತ್ರದುರ್ಗ : ಅಡಿಕೆ ವ್ಯಾಪಾರ ಮಾಡಿ ಬಂದ ಒಂದುವರೆ ಕೋಟಿ ಹಣವನ್ನ ಬೈಕ್ ಮೇಲೆ ಸಾಗಿಸುವ ವೇಳೆ ಬೈಕ್ ತಡೆದು ಹಣ ದರೋಡೆ ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಈಚಲನಾಗೇನಹಳ್ಳಿ ಬಳಿ ನಡೆದಿದೆ..

ಮಹಮದ್ ಇರ್ಫಾನ್ ಹಾಗೂ ಝಾಕೀರ್‌ ಎಂಬುವವರು ಬೈಕ್ ನಲ್ಲಿ ಹಣ ಸಾಗಿಸುತ್ತಿದ್ದ ವೇಳೆ‌ ಕಾರನಲ್ಲಿ ಬಂದವರು ಬೈಕ್ ಅಡ್ಡ ಹಾಕಿ ಹಣ ದರೋಡೆ ಮಾಡಿಕೊಂಡು ಹೋಗಿದ್ದಾರೆ. ಕಾರಿನಲ್ಲಿ 5 ರಿಂದ 6ಜನ ದರೋಡೆಕೋರರಿದ್ದು, ಈ ಗ್ಯಾಂಗ್ ಬೈಕ್ ನಲ್ಲಿದ್ದವರಿಗೆ ಮಾರಕಾಸ್ತ್ರ ತೋರಿಸಿ 1.5 ಕೋಟಿ ಹಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.‌

ಹೈದರಾಬಾದ್ ನಲ್ಲಿ ಅಡಿಕೆ ಮಾರಾಟ‌ ಮಾಡಿ ಚಿತ್ರದುರ್ಗಕ್ಕೆ ಬಂದ ಮಹಮದ್ ಹಾಗೂ ಝೂಕೀರ್ ಎಂಬುವವರು ಬೈಕ್ ಮೇಲೆ ಮನೆಗೆ ತೆರಳುತ್ತಿದ್ದರು. ಈ ವೇಳೆ ದರೋಡೆ ನಡೆದಿದೆ. ಡಿಸೆಂಬರ್ 4ರಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈಚಲನಾಗೇನಹಳ್ಳಿ ಮಾರ್ಗವಾಗಿ ಹೊಸಹಳ್ಳಿಗೆ ತೆರಳುತ್ತಿದ್ದ ವೇಳೆ ಮಾರ್ಗಮದ್ಯದಲ್ಲಿ ಬೈಕ್ ತಡೆದು ದರೋಡೆ ಮಾಡಲಾಗಿದೆ.

ಈ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಚಿತ್ರದುರ್ಗದ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ,ಪರಿಶೀಲನೆ ನಡೆಸಿದ್ದು ಪ್ರಖರಣ ಧಾಖಲಿಸಿಕೊಂಡಿದ್ದಾರೆ.