ಸುದ್ದಿಬಿಂದು ಬ್ಯೂರೋ
ಬೆಂಗಳೂರು : ಲೋಕಸಬಾ ಚುನಾವಣೆ ಬರುತ್ತಿದ್ದಂತೆ ಒಂದಿಷ್ಟು ರಾಜಕೀಯ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದೆ‌.ಸದ್ಯಕ್ಕೆ ಎಲ್ಲರ ಗಮನ ಸೆಳೆದಿರುವ ಪಕ್ಷ ಅಂದ್ರೆ ಅದು ಜೆಡಿಎಸ್. ಈಗಾಗಲೆ ಎಲ್ಲರಿಗೂ ಗೊತ್ತಿರುವ ಹಾಗೆ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಈ ಹಿಂದೆ ಕೂಡ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ ಸಿದ್ದಾಂತ ‌ಜೊತೆ ಮೈತ್ರಿ ಮಾಡಿಕೊಂಡಿರಲಿಲ್ಲ‌. ಆದ್ರೆ ‌ಇದೀಗ ಜೆಡಿಎಸ್ ನ ಬಹುತೇಕ ನಾಯಕರು ಬಿಜೆಪಿ ಸಿದ್ದಾಂತ ‌ಜೊತೆ ಮೈತ್ರಿ ಮಾಡಿಕೊಂಡಿರುವಂತೆ ಕಂಡು ಬರುತ್ತಿದೆ. ಈ ಹಿಂದೆ‌ ಕುಮಾರಸ್ವಾಮಿ ಅವರು ದತ್ತಮಾಲೆ ವಿಚಾರದಲ್ಲಿ ಅದ್ಯಾವುದೋ ದತ್ತ ಮಾಲೆ ಎನ್ನುತ್ತಿದ್ದವರು ಇದೀಗ ನಾನೀಗ ದತ್ತ‌ ಮಾಲೆಯನ್ನು ಕೂಡ ಧರಿಸಬಲ್ಲೆ ಎನ್ನುತ್ತಿದ್ದಾರೆ.

ಈ ಹಿಂದೆ ನಾನು ಬೇರೆ ಬೇರೆಯವರ ಮಾತು ಕೇಳಿ‌ದಾರಿ ತಪ್ಪಿದ್ದೆ. ಇದೀಗ ನನ್ನ ಮಸ್ಸು ಪರಿವರ್ತನೆ ಆಗಿದೆ.ಜೈ ಶ್ರೀರಾಮ ಎನ್ನುವ ರೀತಿಯಲ್ಲಿ ಕುಮಾರಸ್ವಾಮಿ ಅವರು ಮಾತ್ನಾಡತ್ತಿದ್ದಾರೆ. ಇವೇಲ್ಲವನ್ನ ಗಮನಿಸ್ತಾ ಹೋದರೆ ಕುಮಾರಸ್ವಾಮಿ ಅವರು ಸಂಪೂರ್ಣವಾಗಿ ಬದಲಾದಂತೆ ಕಾಣತ್ತಾ ಇದ್ದು, ಹಿಂದುತ್ವದ ಜಪ‌ ಮಾಡತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಜೆಡಿಎಸ್ ಸಾಕಷ್ಟು ಬದಲಾವಣೆ ಬೆಳವಣಿಗೆ ಎಲ್ಲವೂ ನಡೆಯುತ್ತಿದೆ.ಯಾವಾಗ ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಆಯತ್ತೋ ಅವತ್ತೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ ಎಂ ಇಬ್ರಾಹಿಂ ಅವರು ಜೆಡಿಎಸ್ ವಿರುದ್ಧವೇ ಸಿಡಿದ್ದೆದ್ದರು.ನಮ್ಮ ಗಮನಕ್ಕೆ ತರದೆ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಮೈತ್ರಿ ಮಾಡಕೊಂಡಿದ್ದಾರೆ. ಈ ಮೈತ್ರಿ ಹೇಗೆ ಆಗತ್ತೆ ಅಂತಾ ಇಬ್ರಾಹಿಂ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.

ವಿಧಾನಸಭಾ ಚುನಾವಣೆಗೂ ಮುನ್ನ ಕುಮಾರಸ್ವಾಮಿ ಹಾಗೂ ದೇವರ ಗೌಡರನ್ನ ಹಾಡಿ ಹೊಗಳುತ್ತಿದ್ದ ಸಿ ಎಂ ಇಬ್ರಾಹಿಂ ಅದಕ್ಕೆ ತದ್ವಿರುದ್ಧವಾಗಿ ಮಾತನಾಡಲು ಆರಂಬಿಸದ್ದರು. ನಂತರದಲ್ಲ ದೇವೆ ಗೌಡರು ಒಂದು ಸಭೆಯನ್ನ ಕರೆದು ದೇವೆಗೌರಡನ್ನೆ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಪುನರ್ ಆಯ್ಕೆ ಮಾಡಿಲಾಗಿತ್ತು. ಹೀಗೆ ರಾಜ್ಯಾಧ್ಯಕ್ಷರಾಗಿದ್ದ ಸಿ ಎಂ ಇಬ್ರಾಹಿಂ ಹಾಗೂ ಸಿ ಕೆ ನಾಣು ಇವರಿಬ್ಬರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗತ್ತೆ. ಸಿ ಕೆ ನಾಣು ಅವರು ನಾಲ್ಕು ಬಾರಿ ಶಾಸಕರಾಗಿದ್ದವರು, ಸಚಿವರಾಗಿದ್ದವರು ಹಾಗೇ ಜೆಡಿಎಸ್ ನ ರಾಷ್ಟ್ರೀಯ ಉಪಾಧ್ಯಕ್ಷರೂ ಕೂಡ ಸಿ ಕೆ ನಾಣು ಆಗಿದ್ದರು. ಸಿ ಎಂ ಇಬ್ರಾಹಿಂ ‌ಹಾಗೂ ಸಿ ಕೆ ನಾಣು ಇಬ್ಬರನ್ನೂ ಕೂಡ ಉಚ್ಚಾಟನೆ ಮಾಡಲಾಗಿತ್ತು.

ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ಜೆಡಿಎಸ್ ನಲ್ಲಿ ಇನ್ನೊಂದು ಬೆಳವಣಿಗೆ ಸಹ ಆಗಿದೆ‌. ಎಲ್ಲವನ್ನ ಗಮನಿಸ್ತಾ ಹೋದರೆ ಮಹಾರಾಷ್ಟ್ರದಲ್ಲಿ ಶಿವಸೇನೆ ಯಾವರೀತಿಯಾಗಿ ಇಬ್ಬಾಗ ಆಗಿತ್ತೋ,‌ಇಬ್ಬಾಗ ಆದ ಬಳಿಕ ಮೂಲ ಶೀವ ಸೇನೆ ನಮ್ಮದ್ದು ಅಂತಾ ಹೇಳಿ ಚಿಹ್ನೆಗೆ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿದ್ರೋ ಹಾಗೆ ಇದೀಗ ಜೆಡಿಎಸ್ ನಲ್ಲಿಯೂ ಸಹ ಅದೇ ರೀತಿಯಾದ ಬೆಳವಣಿಗೆ ಆಗುವ ಎಲ್ಲಾ ಲಕ್ಷಣಗಳು ಕಂಡು ಬರತ್ತಾ ಇದೆ. ಇದನ್ನ ನೋಡಿದರೆ ರಾಜ್ಯದಲ್ಲಿ ಜೆಡಿಎಸ್ ಇಬ್ಬಾಗ ಆಗುವ ರೀತಿ ಕಂಡು ಬರತ್ತಾ ಇದೆ.ಇದೀಗ ಸಿ ಎಂ ಇಬ್ರಾಹಿಂ ನೇತೃತ್ವದಲ್ಲಿ ಬೆಂಗಳೂರಿನ ಕೆ ಜೆ ಹಳ್ಳಿಯ ಹೊಟೆಲ್ ನಲ್ಲಿ ‌ಸಭೆ ಕರೆದು, ಈ ಸಭೆಯಲ್ಲಿ ಸಾಕಷ್ಟು ಪ್ರಮುಖ ನಾಯಕರು ಬಾಗಿಯಾಗಿದ್ದು, ಅಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯದ ಜೆಡಿಎಸ್ ರಾಜ್ಯಾಧ್ಯಕ್ಷರೂ ಸಹ ಪಾಲ್ಗೊಂಡಿದ್ದರು.

ಅವರೆಲ್ಲರೂ ಸೇರಿಸಿ ಅಂತಿಮವಾದ ನಿರ್ಣಯವನ್ನ ತೆಗೆದುಕೊಂಡಿದ್ದು, ಆ ನಿರ್ಣಾಯಕ ಏನೆಂದ್ರೆ ದೇವೆಗೌಡರನ್ನೆ ಉಚ್ಚಾಟನೆ ಮಾಡಲಾಯಿತು. ಹೊಸ ರಾಷ್ಟ್ರಾಧ್ಯಕ್ಷರನ್ನಾಗಿ ಈ ಹಿಂದೆ ರಾಷ್ಟ್ರ ಉಪಾಧ್ಯಕ್ಷರಾಗಿದ್ದ ಸಿ ಕೆ ನಾಣು ಅವರನ್ನ ಜೆಡಿಎಸ್ ನ ನೂತನ ರಾಷ್ಟ್ರಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಇವರು ಕೇರಳ ಪ್ರಮುಖ ಜೆಡಿಎಸ್ ನಾಯಕರು ಕೂಡ. ಇನ್ನೂ ಜೆಡಿಎಸ್ ರಾಷ್ಟ ಉಪಾಧ್ಯಕ್ಷರನ್ನಾಗಿ ಸಿ ಎಂ ಇಬ್ರಾಹಿಂ ಅವರನ್ನ ನೇಮಕ ಮಾಡಲಾಗಿದೆ‌..

ಸದ್ಯ ಇದೇಲ್ಲವನ್ನ ನೋಡತ್ತಾ ಹೋದರೆ ಜೆಎಸ್ ಪಕ್ಷಕ್ಕಾಗಿ ಕಾನೂನು ಹೋರಾಟ ನಡೆಯುವ ಸಾಧ್ಯತೆ ಇದೆ.ಸದ್ಯ ಈ ಬಗ್ಗೆ ಚುನಾವಣಾ ಆಯೋದ ಮುಂದೆ ಹೋಗುವ ಸಾಧ್ಯತೆ ಸಹ ಇದೆ. ಪಕ್ಷದ ಚಿಹ್ನೆ ನಮ್ಮ ಗ ಬೇಕು. ಮೂಲ ಜೆಡಿಎಸ್ ನಮ್ಮದೆ ಎನ್ನುವುದು ಸಿ ಎಂ ಇಬ್ರಾಹಿಂ ಅವರ ವಾದ ಕೂಡ ಆಗಿದೆ. ಈ ಎಲ್ಲಾ ಬೆಳವಣಿಗೆ ಹಿಂದೆ ಈಗಾಗಲೇ ಜೆಡಿಎಸ್ ನ ಒಂದಿಷ್ಟು ನಾಯರು ನಿಂತುಕೊಂಡಿದ್ದು, ಮುಂದೆ ಏನಾಗತ್ತೆ ಅಂತಾ ಈಗಲೆ ಹೇಳಲು ಸಾಧ್ಯವಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಇಬ್ಬಾಗ ಆಗಿರುವಂತೆ ಕಂಡು ಬರುತ್ತಿರೋದು ಮಾತ್ರ ಸತ್ಯ.