suddibindu.in
ಹಳಿಯಾಳ : ಪ್ರೀತಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಚಾಕು ಇರಿತಕ್ಕೆ ಇಬ್ಬರೂ ಯುವತಿಯರು ಪ್ರಾಣಕಳೆದುಕೊಂಡರೆ. ಇತ್ತೀಚೆಗೆ ಕುಮಟಾದಲ್ಲಿಯೂ ಸಹ ಯುವತಿ ಓರ್ವಳು ಪ್ರೀತಿ ನಿರಾಕರಣೆ ಮಾಡಿದಕ್ಕೆ ಮಾಜಿ ಪ್ರೀಯಕರನೋರ್ವ ಹಾಲಿ ಪ್ರೀಯಕರನಿಗೆ ಚಾಕು ಇರಿದು ಹಲ್ಲೆ ಮಾಡಿದ್ದ‌, ಈ ಘಟನೆ ನಡುವೆಯೇ ಇದೀಗ ಸಹೋದರಿಯನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನೋರ್ವನಿಗೆ ಯುವತಿಯ ಸಹೋದರ ಚಾಕು ಇರಿದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಜನ‌ ನಿಬಿಡ ಸ್ಥಳದಲ್ಲಿ ನಡೆದಿದೆ
.

ಹಳಿಯಾಳ ಚವ್ಹಾಣ ಪ್ಲಾಟ್ ನಿವಾಸಿ ಮಹ್ಮದ್ ಜಬಿವುಲ್ಲಾ(24) ಚಾಕು ಇರಿತಕ್ಕೊಳಗಾದ ಯುವಕನಾಗಿದ್ದು ಹಳಿಯಾಳದ ತೇರಗಾಂವ್ ನ ಮಹ್ಮದ್ ಕೈಪ್(20) ಚಾಕು ಇರಿದ ಯುವಕನಾಗಿದ್ದಾನೆ.

ಇದನ್ನೂ ಓದಿ

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್ ಘೋಟ್ನೇಕರ ಅವರ ಕಚೇರಿ ಬಳಿ ಪಟ್ಟಣದ ಚವ್ಹಾಣ ಪ್ಲಾಟ್ ನಿವಾಸಿ ಮಹ್ಮದಜಬಿವುಲ್ಲಾ ಮಹಾಬುಬಲಿ ಮಕೇಸಾಬ ಇತನಿಗೂ ತಾಲೂಕಿನ ತೇರಗಾಂವ ಗ್ರಾಮದ ನಿವಾಸಿ ಮಹ್ಮದ್ ದಕೈಫ್ ನಾಸೀರ ದುರ್ಗದ ಇತನಿಗೂ ಸಹೋದರಿಯ ಪ್ರೀತಿಯ ವಿಚಾರವಾಗಿ ಜಗಳವಾಗಿ ಮಹ್ಮದ್ ಕೈಫ್ ಮಾವಿನ ಹಣ್ಣು ಕತ್ತರಿಸುವ ಚಾಕುವಿಂದ ಮಹ್ಮದ್ ಜಬಿವುಲ್ಲಾ ಈತನ ಎಡ ತೋಳಿಗೆ ಹಾಗೂ ಎಡ ಭುಜದ ಹತ್ತಿರ ಹೊಡೆದು ಗಾಯಗೊಳಿಸಿದ್ದಾನೆ. ಅದೃಷ್ಟವಶಾತ್ ಯುವಕ ಬಚಾವ್ ಆಗಿದ್ದು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಕು ಇರಿತದಿಂದ ಹಲ್ಲೆಗೆ ಒಳಗಾಗಿರುವ ಮಹ್ಮದ್ ಜಬಿವುಲ್ಲಾ ಹಾಗೂ ಮಹಮ್ಮದ ಕೈಫ್ ನಾಸೀರ ದುರ್ಗದ ಇತನ ಸಹೋದರಿಯ ಹಿಂದೆ ಬಿದ್ದು ಪೀಡಿಸಿದ ವಿಚಾರವಾಗಿ ಕಳೆದ 6ತಿಂಗಳ ಹಿಂದೆ ಗಲಾಟೆ ನಡೆದು ಪ್ರಕರಣ ಕೆಲವು ಮುಖಂಡರ ನಡುವೆ ಇತ್ಯರ್ಥ ಗೊಂಡಿತ್ತು ಎನ್ನಲಾಗಿದೆ.. ಆದರೇ ಮತ್ತೆ ಇದೀಗ ಇಬ್ಬರ ನಡೆವೆ ಮಾತಿಗೆ ಮಾತು ಉಂಟಾಹಿ ಗಲಾಟೆ ನಡೆದು ಚಾಕು ಇರಿತದಲ್ಲಿ ಕೊನೆಗೊಂಡಿದೆ. ಪ್ರಕಣದ ಕುರಿತು ಹಳಿಯಾಳ‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.