ಸುದ್ದಿಬಿಂದು ನ್ಯೂಸ್
ಕುಮಟಾ :
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಒಂದೊಂದು ಮತವೂ ಅತ್ಯವಶ್ಯ ಎಂದರಿತ ದೇವರಹಕ್ಕಲದ ರಾಜೇಶ ನಾಯ್ಕರು ತನ್ನ ಭೂತಿನ ಅನಾರೋಗ್ಯ ಪೀಡಿತ ಉಮೇಶ್ ಭಂಡಾರಿ ಅವರನ್ನು ಮತಗಟ್ಟೆಗೆ ಎತ್ತಿಕೊಂಡು ಹೋಗಿ ಮತದಾನ ಮಾಡಿಸಿದರು.

ಪ್ರತೀ ಭೂತಿನಲ್ಲೂ ರಾಜೇಶ ಅವರಂತಹ ಅಭಿಮಾನಿ, ಕಾರ್ಯಕರ್ತ ಇದ್ದರೆ ಅಭ್ಯರ್ಥಿಯ ಆಸೆ ಈಡೇರುವುದರಲ್ಲಿ ಅನುಮಾನವೇ ಇಲ್ಲ ಎಂದು ಜನ ಹೆಮ್ಮೆಯಿಂದ ಹೇಳುತ್ತಿದ್ದಾರೆ.