.ಬೆಂಗಳೂರು: ಸುಮಾರು 12 ವರ್ಷಗಳ ಹಿಂದಿನ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ವಿರುದ್ಧ ತೀರ್ಪು ನೀಡಿರುವ ಕರ್ನಾಟಕದ ಜನಪ್ರತಿನಿಧಿ ನ್ಯಾಯಾಲಯ, ಮಧು ಬಂಗಾರಪ್ಪನವರಿಗೆ 6 ಕೋಟಿ 96 ಲಕ್ಷದ 70 ಸಾವಿರ ರೂ.ಗಳ ದಂಡ ವಿಧಿಸಿದೆ. ತಪ್ಪಿದರೆ 6 ತಿಂಗಳುಗಳ ಸೆರೆವಾಸ ಅನುಭವಿಸಬೇಕು ಎಂದು ತೀರ್ಪು ನೀಡಿದೆ.

ಪ್ರಕರಣವೇನಿದು

ಇದು 2011ರಲ್ಲಿ ದಾಖಲಾಗಿದ್ದ ಪ್ರಕರಣ. ಮಧು ಬಂಗಾರಪ್ಪನವರು ಅವರೇ ಸ್ಥಾಪಿಸಿದ್ದ ಆಕಾಶ್ ಆಡಿಯೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಆ ಸಂಸ್ಥೆಯಿಂದ ರಾಜೇಶ್ ಎಕ್ಸ್ ಪೋರ್ಟ್ಸ್ ಅವರಿಗೆ 6 ಕೋಟಿ, 96 ಲಕ್ಷದ 60 ಸಾವಿರ ರೂ. ಸಂದಾಯವಾಗಬೇಕಿತ್ತು. ಹಲವಾರು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಮಧು ಬಂಗಾರಪ್ಪನವರು ಚೆಕ್ ನೀಡಿದ್ದರು. ಆದರೆ, ಅದು ಬೌನ್ಸ್ ಆಗಿತ್ತು. ಇದರಿಂದ, ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆಯು ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಆಗಿನಿಂದ ವಿಚಾರಣೆ ನಡೆಯುತ್ತಿದ್ದ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತೀರ್ಪು ಹೊರಬಿದ್ದಿದೆ..

ಪ್ರಮುಖಾಂಶಗಳು 12 ವರ್ಷ ಹಿಂದಿನ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ.6,90,70,000 ರೂ.ಗಳ ದಂಡ, ತಪ್ಪಿದರೆ 6 ತಿಂಗಳು ಜೈಲು ಶಿಕ್ಷೆ.ಬೆಂಗಳೂರಿನಲ್ಲಿರುವ ಜನಪ್ರತಿನಿಧಿ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ.